ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಹಮ್ಮಿಕೊಂಡಿದ್ದ ‘ಅಕ್ಕಪಡೆ’ – ಮಹಿಳೆಯರ ಶಕ್ತಿ ಪ್ರದರ್ಶನ ಮತ್ತು ಆತ್ಮರಕ್ಷಣಾ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರು ಭಾಗವಹಿಸಿ, ಮಹಿಳಾ ಸಿಬ್ಬಂದಿಯ ಆತ್ಮರಕ್ಷಣೆಯ ಸಾಹಸ, ಕರಾಟೆ, ಲಾಠಿಪ್ರಹಾರ, ಕೌಶಲ್ಯ ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿದರು.
ಹೆಣ್ಣು ಅಂದ್ರೆ ಭೂಮಿ, ಹೆಣ್ಣು ಅಂದ್ರೆ ಧೈರ್ಯ, ಹೆಣ್ಣು ಅಂದ್ರೆ ಭರವಸೆ, ಹೆಣ್ಣು ಅಂದ್ರೆ ಶಕ್ತಿ, ಹೆಣ್ಣು ಅಂದ್ರೆ ಬೆಳಕು. ಈ ಬೆಳಕು ಇಂದು ಪ್ರತಿ ಕುಟುಂಬವನ್ನೂ ಬೆಳಗುತ್ತಿದೆ. ನಾರಿ ಶಕ್ತಿ ಈ ದೇಶದ ಶಕ್ತಿಯಾಗಿದೆ.
ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಅಕ್ಕಪಡೆ ತಯಾರಾಗಿದೆ. ಅಕ್ಕಪಡೆಗೆ ಸೇರಿರುವವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಹೋರಾಟ, ನಿಮ್ಮ ಶ್ರಮ, ನಿಮ್ಮ ಶಕ್ತಿ, ನಿಮ್ಮ ಧೈರ್ಯ, ನಿಮ್ಮ ಸಾಧನೆ ಎಲ್ಲದ್ದಕ್ಕೂ ಫಲ ಸಿಗುತ್ತದೆ. ರಾಜ್ಯದಲ್ಲಿ 10,000 ಅಕ್ಕಪಡೆಗಳನ್ನು ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿದೆ. ನಿಮ್ಮಲ್ಲಿರುವ ಸಾಹಸ ಹಾಗೂ ಕೌಶಲ್ಯಗಳನ್ನು ಹೊರತೆಗೆಯಲು ಅಕ್ಕಪಡೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಸಚಿವರಾದ ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ್, ಶಾಸಕರಾದ ರಹೀಂ ಖಾನ್, ಸಂಸದರಾದ ಸಾಗರ ಖಂಡ್ರೆ ಅವರು ಸೇರಿದಂತೆ ಹಲವಾರು ನಾಯಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.



