IMG-20241220-WA00051.jpg
Spread the love

ಬನ್ನಂಜೆ ಜಯಲಕ್ಷ್ಮಿ ಸಿಲ್ಕ್ ಎದುರಿರುವ ಅವೈಜ್ಞಾನಿಕ ಡಿವೈಡರ್ ಅಗಲೀಕರಣ ಕೂಡಲೇ ಮುಚ್ಚಿಸಿ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಆಗ್ರಹಿಸಿದ್ದಾರೆ.

ಉಡುಪಿ ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 169ಎ ಈ  ರಸ್ತೆಗೆ ತಾಗಿಕೊಂಡು ಜಯಲಕ್ಷ್ಮಿ ಸಿಲ್ಕ್ ಎಂಬ ದೊಡ್ಡಮಟ್ಟದ ಬಟ್ಟೆಯ ಮಾರಾಟ ಮಳಿಗೆ ಇದ್ದು ,ಕೇವಲ ಇವರಿಗೆ ವ್ಯಾಪಾರಕ್ಕಾಗಿ ಮಾತ್ರ ನಮ್ಮ ಲೋಕಸಭಾ ಸದಸ್ಯರಾದ ಶ್ರೀನಿವಾಸ್ ಪೂಜಾರಿಯವರು. ಮತ್ತು ಶಾಸಕರಾದ ಯಶ್ಪಾಲ್ ಸುವರ್ಣ ರವರು ಮತ್ತು ಅಂದು ಉಡುಪಿ ನಗರಸಭೆಯ ಆಡಳಿತ ನಡೆಸುತ್ತಿದ್ದ ಬಿಜೆಪಿಯ ನಗರಸಭಾ ಅಧ್ಯಕ್ಷರು .ಮತ್ತು ಸ್ಥಳೀಯ ಬಿಜೆಪಿಯ ನಗರಸಭಾ ಸದಸ್ಯರು. ಇವರ ಮಹತ್ವದ ಬೆಂಬಲದಿಂದಾಗಿ ಈ ರಸ್ತೆಯ ಡಿವೈಡರ್ ಅಗಲ ಗೊಂಡಿದೆ .

ಈ ಹಿಂದೆ ನಗರಸಭಾ ಅಧಿವೇಶನದಲ್ಲಿ ನಾನು ಈ ಬಗ್ಗೆ ಆಕ್ಷೇಪಿಸಿದ್ದು .ನನ್ನ ವಿರುದ್ಧವೇ ಈ ಬಿಜೆಪಿಯ ನಗರಸಭಾ ಸದಸ್ಯರು ಮುಗಿಬಿದ್ದು ಕ್ಷಮೆ ಕೇಳಿಕೊಳ್ಳಬೇಕೆಂದು ಒತ್ತಾಯಿಸಿರುತ್ತಾರೆ? ಆದರೂ ನಾನು ಅದಕ್ಕೆ ಬಗ್ಗದೆ ನನ್ನ ಆಕ್ಷೇಪಣೆಯನ್ನು ಸಮರ್ಥಿಸಿಕೊಂಡಿದ್ದೇನೆ. ಇದರ ಬಗ್ಗೆ ಜಿಲ್ಲಾಧಿಕಾರಿಯವರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರ ಇದರ ಅಧಿಕಾರಿಗಳನ್ನು ಕರೆಯಿಸಿ ಈ ಡಿವೈಡರ್ ಅನ್ನು ಹಿಂದೆ ಇರುವಂತೆ ಮಾಡಬೇಕಾಗಿ ನಾನು ಈ ಕೂಡಲೇ ಒತ್ತಾಯಿಸುತ್ತಿದ್ದೇನೆ.

ಮುಂದಿನ ದಿನಗಳಲ್ಲಿ ಇಲ್ಲಿ ಏನಾದರೂ ಅಪಘಾತವಾಗಿ ಪ್ರಾಣ ಹಾನಿ ಸಂಭವಿಸಿದರೆ ಅದಕ್ಕೆ ಅಂಗಡಿಯ ಮಾಲಕರು ಮತ್ತು ಅದಕ್ಕೆ ಸಹಕರಿಸಿದ ತಾವೆಲ್ಲರೂ ಹೊಣೆ ಹೊರಬೇಕಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಮತ್ತು ಉಡುಪಿ ನಗರಸಭೆಯ ಪ್ರಸ್ತುತ ನಾಮ ನಿರ್ದೇಶಿತ ಸದಸ್ಯರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.

error: No Copying!