ಗಂಗೊಳ್ಳಿ: ದಿನಾಂಕ :05-07-2026 (ಹಾಯ್ ಉಡುಪಿ ನ್ಯೂಸ್) ಮರವಂತೆ ಗ್ರಾಮದ ಮಾರುತಿ ಕಾಂಪ್ಲೆಕ್ಸ್ ನ ಚಿನ್ನದ ಅಂಗಡಿ ಗೆ ಕಳ್ಳರು ನುಗ್ಗಿ ಕಳ್ಳತನ ನಡೆಸಿರುವ ಬಗ್ಗೆ ವಿಶ್ವನಾಥ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮರವಂತೆ ಗ್ರಾಮದ ಹರಿಶ್ಚಂದ್ರ ರಸ್ತೆ,ಚಳ್ಳಿಕಳ್ಳಿ ಮನೆ ನಿವಾಸಿ ವಿಶ್ವನಾಥ (35)ಎಂಬವರು ಬೈಂದೂರು ತಾಲೂಕು ಮರವಂತೆ ಗ್ರಾಮದ ಮಾರುತಿ ಕಾಂಪ್ಲೆಕ್ಸ್ ನಲ್ಲಿ ಮಾಂಗಲ್ಯ ಎಂಬ ಚಿನ್ನದ ಅಂಗಡಿಯನ್ನು ನಡೆಸಿಕೊಂಡಿದ್ದು, ದಿನಾಂಕ 04/07/2026 ರಂದು ರಾತ್ರಿ ಯಾರೋ ಕಳ್ಳರು ವಿಶ್ವನಾಥ ರವರು ನಡೆಸಿಕೊಂಡಿರುವ ಚಿನ್ನದ ಅಂಗಡಿಯ ಶಟರ್ ಮುರಿದು ಒಳ ಪ್ರವೇಶಿಸಿ ಅಂಗಡಿ ಡ್ರಾವರ್ ಮತ್ತು ಕ್ಯಾಬಿನ್ ನಲ್ಲಿರುವ ಸುಮಾರು 600 ಗ್ರಾಂ ಬೆಳ್ಳಿಗಟ್ಟಿ ಅಂದಾಜು ಮೌಲ್ಯ 1,44,000/-ರೂ ಮತ್ತು 1000/- ರೂ ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ U/s :331(4), 305 BNS ರಂತೆ ಪ್ರಕರಣ ದಾಖಲಾಗಿದೆ.
