IMG-20230719-WA00161.jpg
Spread the love

ಉಡುಪಿ: ದಿನಾಂಕ:05-07-2026 (ಹಾಯ್ ಉಡುಪಿ ನ್ಯೂಸ್) ಸಿಟಿಬಸ್ ನಿಲ್ದಾಣದಲ್ಲಿ ಹೂಡೆಗೆ ತೆರಳಲು ನಿಂತಿದ್ದ ಬಸ್ಸಿಗೆ ಇನ್ನೊಂದು ಬಸ್ಸಿನ ಚಾಲಕ ಮತ್ತು ಸಿಬ್ಬಂದಿ ಗಳು ಉದ್ದೇಶಪೂರ್ವಕವಾಗಿ ಗುದ್ದಿ 1.50 ಲಕ್ಷ ರೂಪಾಯಿ ಹಾನಿ ಉಂಟು ಮಾಡಿದ್ದಾರೆ ಎಂದು ಹಾನಿಗೊಳಗಾದ ಬಸ್ಸಿನ ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.

ಮಲ್ಪೆ ಬಡಾನಿಡಿಯೂರು ನಿವಾಸಿ ಕೆ ವೈಭವ್‌ ಪೈ (21), ಎಂಬವರು KA-19-D-8000 ಎಂಬ ಬಸ್ಸಿನ ಚಾಲಕನಾಗಿದ್ದು , ದಿನಾಂಕ 04/07/2026 ರಂದು ಎಂದಿನಂತೆ ಸಮಯ ರಾತ್ರಿ 9:15 ಗಂಟೆಗೆ ಉಡುಪಿಯಿಂದ ಕೆಮ್ಮಣ್ಣು ಹೂಡೆಗೆ ಹೊರಡಲು ನಿಲ್ಲಿಸಿರುವಾಗ ವೈಭವ್ ಪೈ ರವರ ಬಸ್ಸಿನ ಮುಂದೆ KA-19-C-6852 ನಂಬರಿನ ಬಸ್ಸನ್ನು ನಿಲ್ಲಿಸಿದ್ದು ಬಸ್ಸು 8:53 ಕ್ಕೆ ಉಡುಪಿಯಿಂದ ಕೆಮ್ಮಣ್ಣು ಹೂಡೆಗೆ ಹೊರಡಬೆಕಾಗಿದ್ದು ಸಮಯ ರಾತ್ರಿ 9:00 ಗಂಟೆ ಆದರು ಹೊರಡದಿದ್ದಾಗ KA-19-D-8000 ನಂಬರಿನ ಬಸ್ಸಿನ ಕಂಡಕ್ಟರ್‌ ಬಸ್ಸು ಯಾಕೆ ಹೊರಡಲಿಲ್ಲ ಎಂದು ಕೇಳಿದಾಗ ಬಸ್ಸು ಹಾಳಾಗಿ ಸ್ಟಾರ್ಟ್‌ ಆಗದೆ ಇದ್ದು ಹೂಡೆಗೆ ಹೋಗುವುದಿಲ್ಲವಾಗಿ ತಿಳಿಸಿರುತ್ತಾರೆ .ನಂತರ ವೈಭವ ಪೈ ರವರು KA-19-D-8000 ನಂಬರಿನ ಬಸ್ಸನ್ನು ಆ ಬಸ್ಸಿನ ಮುಂದಕ್ಕೆ ನಿಲ್ಲಿಸಿದ್ದು KA-19-C-6852 ನಂಬರಿನ ಬಸ್ಸಿನ ಚಾಲಕ ಸಲ್ಮಾನ್‌ ಉದ್ದೇಶಪೂರ್ವಕವಾಗಿ ವೈಭವ ರವರ ಬಸ್ಸು ಮುಂದಕ್ಕೆ ಹೋಗದಂತೆ ತಡೆಯುವ ಉದ್ದೇಶದಿಂದ ಬಸ್ಸಿನ ಎಡ ಬದಿಗೆ ಎರಡು ಬಾರಿ ಡಿಕ್ಕಿ ಹೊಡೆದು 1,50,000/- ಲಕ್ಷ ಗಳಷ್ಟು ನಷ್ಟ ಉಂಟುಮಾಡಿರುವುದಲ್ಲದೆ ಬಸ್ಸಿನ ಕಂಡಕ್ಟರ್‌ ರೋಷನ್‌, ಶಾರುಖ್‌, ಅಫ್ರೋಜ್, ನವಾಜ್ ಎಂಬುವವರು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವೈಭವ್ ಪೈ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ 84/2026, ಕಲಂ: 126(2), 324(3), 352, 351(2) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!