ಉಡುಪಿ: ದಿನಾಂಕ:03-06-2026 (ಹಾಯ್ ಉಡುಪಿ ನ್ಯೂಸ್) ನಗರದ ಟೈಮ್ ಸ್ಕ್ವೇರ್ ಮಾಲ್ ನಲ್ಲಿ ಸಹಾಯಕ ಸ್ಟೋರ್ ಮೆನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಸಂಸ್ಥೆಗೆ 13.39 ಲಕ್ಷ ರೂಪಾಯಿ ವಂಚಿಸಿದ್ದಾರೆಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೀಲಾ ಲಕ್ಷ್ಮೀ ನಾರಾಯಣ ಇವರು ಮಾರ್ಕೇಟ್ 99 ಪ್ರೈವೇಟ್ ಲಿಮಿಟೆಡ್ ಟೈಮ್ ಸ್ಕೈರ್ ಮಾಲ್ ಕಲ್ಸಂಕ ಜಂಕ್ಷನ್ ಉಡುಪಿ ತಾಲೂಕು ಇದರ ಏರಿಯಾ ಮ್ಯಾನೇಜರ್ ಆಗಿದ್ದು, ಸಂಸ್ಥೆಯು ಭಾರತದಾದ್ಯಂತ ಮಾರ್ಕೇಟ್ 99 ಎಂಬ ಸ್ಟೇಷನರಿ , ಟಾಯ್ಸ್ ಮಾರಾಟದ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ಹೊಂದಿದ್ದು, ಸಂಸ್ಥೆಯ ಉಡುಪಿ ಕಲ್ಸಂಕ ದ ಶಾಖೆಯಲ್ಲಿ ಅಪಾದಿತ ನಜೀರ್ ಆಹಮ್ಮದ್ ಖಾಸಿಂಖಾನ್ ಎಂಬವನು ಸಂಸ್ಥೆಯಲ್ಲಿ ಸಹಾಯಕ ಸ್ಟೋರ್ ಮ್ಯಾನೇಜರ್ ಆಗಿ ಎರಡು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು ಬ್ಯಾಂಕ್ ಹಾಗೂ ವ್ಯಾಪಾರ ಹಾಗೂ ನಗದು ನಿರ್ವಹಣಾ ಕರ್ತವ್ಯವನ್ನು ಮಾಡುತ್ತಿದ್ದು , ರೆಡಿಯಂಟ್ ಕ್ಯಾಶ್ ಮ್ಯಾನೇಜ್ಮೇಂಟ್ ಸರ್ವೀಸ್ ಪ್ರೈ ಲಿಮಿಟೇಟ್ ಸಂಸ್ಥೆಯವರು ಮಾರ್ಕೇಟ್ 99 ಪ್ರೈವೇಟ್ ಲಿಮಿಟೆಡ್ ಪರವಾಗಿ ಗ್ರಾಹಕರಿಂದ ಬರಬೇಕಾದ ಹಣವನ್ನು ಸಂಗ್ರಹಿಸಿ ಅಪಾದಿತನಿಗೆ ಠೇವಣಿ ಸ್ಲಿಪ್ ಭರ್ತಿ ಮಾಡಿ ನಗದನ್ನು ಅಪಾದಿತನ ವಶಕ್ಕೆ ನೀಡುತ್ತಿದ್ದು ದಿನಾಂಕ 18/12/2025 ರಂದು ಬೀಲಾ ಲಕ್ಷ್ಮೀ ನಾರಾಯಣರವರು ಸಂಸ್ಥೆಯ ಆಡಿಟ್ ಹಾಗೂ ಲೆಕ್ಕ ಪರಿಶೋಧನೆ ಮಾಡುವ ಸಂದರ್ಭದಲ್ಲಿ ಹಣಕಾಸು ಲೆಕ್ಕಾಚಾರ ಹೊಂದಾಣಿಕೆ ಬಾರದ ಕಾರಣ ಸಂಶಯ ಬಂದು ದಿನಾಂಕ 14/07/2025 ರಿಂದ ದಿನಾಂಕ 15/12/2025 ರ ವರೆಗೆ ಅರೋಪಿ ನಜೀರ್ ಅಹಮದ್ ಖಾಸಿಂ ಖಾನ್ ನು ಜಮಾ ಮಾಡಿದ ಸ್ಲಿಪ್ ಗಳನ್ನು ಪರೀಶೀಲಿಸಿದಾಗ ತಿದ್ದಿ ಬರೆದಿರುವುದು ತಿಳಿದುಬಂದಿದ್ದು ಅರೋಪಿತನು ಈ ಮೇಲಿನ ದಿನಾಂಕದ ವರೆಗೆ ರೂಪಾಯಿ 13,39,000/- ರೂಪಾಯಿಗಳನ್ನು ಸಂಸ್ಥೆಗೆ ವಂಚಿಸಿರುವುದು ಸಂಸ್ಥೆಯ ದಾಖಲೆಗಳಿಂದ ತಿಳಿದು ಬಂದಿರುತ್ತದೆ .
ನಜೀರ್ ಅಹಮದ್ ಖಾಸಿಂ ಖಾನ್ ನು ಲಾಭ ಗಳಿಸುವ ಉದ್ದೇಶದಿಂದ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಸಂಸ್ಥೆಗೆ ಮೋಸ , ವಂಚನೆ, ನಂಬಿಕೆ ದ್ರೋಹ ಮಾಡಿರುವುದಾಗಿ ಬೀಲಾ ಲಕ್ಷ್ಮೀ ನಾರಾಯಣ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ:316, 318, 336, 340 BNS ರಂತೆ ಪ್ರಕರಣ ದಾಖಲಾಗಿದೆ.
