ಬೈಂದೂರು: ದಿನಾಂಕ:30-06-2026(ಹಾಯ್ ಉಡುಪಿ ನ್ಯೂಸ್) ಅಜ್ಮೀರ್ ರೈಲ್ವೇ ನಿಲ್ದಾಣದಿಂದ ಕೇರಳಕ್ಕೆ ತೆರಳುತ್ತಿದ್ದ ವ್ಯಕ್ತಿ ಯೋರ್ವರು ಮಾರ್ಗ ಮಧ್ಯದಲ್ಲಿ ರೈಲಿನಿಂದ ಕಾಣೆಯಾಗಿದ್ದಾರೆ ಎಂದು ಮುಸ್ತಫಾ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ನಿವಾಸಿ ಮುಸ್ತಪಾ (38) ಇವರು ತನ್ನ ತಂದೆ ಮುಸಾ ಯಾನೆ ಅಬುಸಾಲಿ (68) ಮತ್ತು ಕುಟುಂಬದವರೊಂದಿಗೆ ದಿನಾಂಕ 22/06/2026 ರಂದು ಕಾಸರಗೊಡಿನಿಂದ ಅಜ್ಮೀರ್ ದರ್ಗಾಕ್ಕೆ ರೈಲಿನಲ್ಲಿ ಪ್ರಯಾಣಿಸಿ ದಿನಾಂಕ 23/06/2026 ರಂದು ಅಜ್ಮೀರ್ ತಲುಪಿ ದರ್ಗಾದ ದರ್ಶನ ಮಾಡಿ ದಿನಾಂಕ 26/06/2026 ರಂದು ಅಜ್ಮೀರ್ ರೈಲ್ವೆ ನಿಲ್ದಾಣದಿಂದ ಕಾಯ್ದಿರಿಸಿದ್ದ ಮುರುಸಾದ್ ಎಕ್ಸಪ್ರೇಸ್ ರೈಲಿನ S4 ಬೋಗಿಯಲ್ಲಿ ಸೀಟ್ ನಂ 59, 60, 70, 71 ರಲ್ಲಿ ಕಾಸರಗೋಡಿಗೆ ಪ್ರಯಾಣಿಸುತ ಮುಸಾ ಯಾನೆ ಅಬುಸಾಲೆ ರವರು ಸೀಟ್ ನಂ 57 ರಲ್ಲಿ ಇದ್ದು ದಿನಾಂಕ 27/06/2026 ರಂದು ರಾತ್ರಿ 10:00 ಗಂಟೆಗೆ ಚಲಿಸುತ್ತಿದ್ದ ರೈಲಿನಲ್ಲಿ ಕಾರವಾರ ಸಮೀಪ ಕುಂಟುಂಬದವರೊಂದಿಗೆ ಒಟ್ಟಿಗೆ ಊಟ ಮಾಡಿ ಮಲಗಿಕೊಂಡಿದ್ದವರನ್ನು ದಿನಾಂಕ 27/06/2026 ರಂದು ಬೆಳಿಗಿನ ಜಾವ 01:00 ಗಂಟೆ ಸುಮಾರಿಗೆ ರೈಲು ಮಂಗಳೂರಿನ ಸಮೀಪ ತಲುಪಿದಾಗ ಮುಸಾ ಯಾನೆ ಅಬುಸಾಲಿ ರವರು ರೈಲ್ವೆ ಸೀಟಿನಲ್ಲಿ ಇಲ್ಲದನ್ನು ಮುಸ್ತಾಪಾ ರವರು ನೋಡಿ ರೈಲು ಶೌಚಾಲಯ ಮತ್ತು ಬೋಗಿಗಳಲ್ಲಿ ಹುಡುಕಾಡಿ ಪತ್ತೆಯಾಗದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಮುಸಾ ಯಾನೆ ಅಬುಸಾಲೆ ರವರು ವಯೋವೃದ್ದರಾಗಿದ್ದು ನಡೆದಾಡಲು ವಾಕಿಂಗ್ ಸ್ಟೀಕ್ ಬಳಸುತ್ತಿದ್ದವರು ರೈಲು ಎಲ್ಲಿಯೋ ನಿಂತ ವೇಳೆ ಯಾವುದೋ ನಿಲ್ದಾಣದಲ್ಲಿ ಇಳಿದು ದಿಕ್ಕು ಕಾಣದೇ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬೈಂದೂರು ರೈಲ್ವೇ ನಿಲ್ದಾಣದ ವ್ಯಾಪ್ತಿಯಲ್ಲಿ ಕಾಣೆಯಾಗಿರುವ ಸಾದ್ಯತೆ ಇರುವುದಾಗಿ ನೀಡಿದ ದೂರಿನಂತೆ ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿದೆ .
