ಬೈಂದೂರು: ದಿನಾಂಕ:30-06-2026(ಹಾಯ್ ಉಡುಪಿ ನ್ಯೂಸ್) ಶಿರೂರು ಮೈದಿನಪುರದಲ್ಲಿ ಇಸ್ಪೀಟ್ ಜುಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುನಿಲ್ ಕುಮಾರ್ ಬಿ ವೈ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುನೀಲ್ ಕುಮಾರ್ ಬಿ.ವೈ ಅವರಿಗೆ ದಿನಾಂಕ 29/06/2026 ರಂದು ಬೈಂದೂರು ತಾಲೂಕು ಶಿರೂರು ಗ್ರಾಮದ ಶಿರೂರು ಮೈದಿನಪುರ ಎಂಬಲ್ಲಿ ಕೆಲವರು ಇಸ್ವಿಟ್ ಜುಗಾರಿ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿ ಸ್ಥಳದಲ್ಲಿ ಜುಗಾರಿ ಆಟ ಆಡುತ್ತಿದ್ದ 1. ಶ್ರೀಧರ(44), ಮುಲ್ಲಿಗದ್ದೆ ಭಟ್ಕಳ,2. ಸಂತೋಷ ಕುಮಾರ್ (35), ಮೈದಿನಪುರ ಶಿರೂರು, 3. ಸುರೇಶ್ (43), ಮಗಲ ಗದ್ದೆ, ನೀರ್ಗದ್ದೆ ಶಿರೂರು ಬೈಂದೂರು, 4. ದೇವೇಂದ್ರ (38), ಮುಂಡೊಳ್ಳಿ ಹೊಸಮನೆ ಭಟ್ಕಳ ಇವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದು 5. ಕೃಷ್ಣ ಗಾಣಿಗ, 6. ಗಣೇಶ್ ಪೂಜಾರಿ ಶಿರೂರು ಓಡಿಹೋಗಿದ್ದು ಅಪಾದಿತರು ಜುಗಾರಿ ಆಟಕ್ಕೆ ಬಳಸಿದ 2 ಟರ್ಪಾಲು ಮತ್ತು ನಗದು ಹಣ ರೂಪಾಯಿ 1420/- ಮತ್ತು ಇಸ್ವೀಟು ಎಲೆಗಳನ್ನು ಸ್ವಾದೀಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕಲಂ: 87 KP Act ರಂತೆ ಪ್ರಕರಣ ದಾಖಲಾಗಿದೆ.
