unnamed-1.webp
Spread the love

ಕಾರ್ಕಳ: ದಿನಾಂಕ:27-06-2026(ಹಾಯ್ ಉಡುಪಿ ನ್ಯೂಸ್) ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಕರ್ತವ್ಯದಲ್ಲಿ ಲೋಪ ಮತ್ತು ಅಕ್ರಮ ಎಸಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಭಾಕರ ಬಂಗೇರ (68)  ಎಂಬವರು  ಕರ್ನಾಟಕ ಸರಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿದ್ದು,  ಆರೋಪಿ ಅಕ್ಷಯ ದೇವಾಡಿಗ  (29)  ವಾಸ:  ಕಮಲ ನಿವಾಸ ಹಂಚಿಕಟ್ಟೆ  ಎಣ್ಣೆಹೊಳೆ ಮರ್ಣೆ ಗ್ರಾಮ ಇವರು ದಿನಾಂಕ 01-12-2022 ರಿಂದ 07-05-2026 ರ ತನಕ  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ  ಡಾಟಾ ಎಂಟ್ರಿ ಆಪರೇಟರ್‌ ಆಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದು. ಇಲಾಖಾ ಲೆಕ್ಕ ಪರಿಶೋಧನೆಯ ಸಂಧರ್ಭದಲ್ಲಿ ಆರೋಪಿಯು ಕರ್ತವ್ಯದಲ್ಲಿ ಲೋಪ ಮತ್ತು ಅಕ್ರಮ ಮಾಡಿರುವುದು ಕಂಡು ಬಂದಿದೆ.

ಈ ಬಗ್ಗೆ ಆರೋಪಿಯಲ್ಲಿ  ವಿವರಣೆಯನ್ನು ಕೇಳಿದಾಗ, ವಿವರಣೆ ನೀಡದೆ ಯಾವುದೇ  ಮಾಹಿತಿ ನೀಡದೆ ದಿನಾಂಕ 7-5-2026 ರಂದು ರಾಜಿನಾಮೆ ಪತ್ರ ನೀಡಿ ಕರ್ತವ್ಯಕ್ಕೆ ಹಾಜಾರಾಗಿರುವುದಿಲ್ಲ. ಧಾರ್ಮಿಕ ಸಂಸ್ಥೆಯು ಹೊಂದಿರುವ ಇಂಡಿಯನ್‌ ಓವರ್‌ ಸೀಸ್‌ ಬ್ಯಾಂಕ್‌ ಗೆ ಆರೋಪಿ  ಅಕ್ಷಯ ದೇವಾಡಿಗನು ದೇವಸ್ಥಾನಕ್ಕೆ ಸಂಬಂದಿಸಿದ ಸಂಸ್ಥೆಯ ಬ್ಯಾಂಕ್‌ ನಲ್ಲಿ ಹೊಂದಿರುವ ಕರೆಂಟ್‌ ಎಕೌಂಟ್‌ ನಂಬ್ರ 084101000006682 (4 ಚೆಕ್‌ ಲೀಪ್)‌ ಹಾಗೂ 084101000007416 (2)ಚೆಕ್‌ ಲೀಪ್‌ ಗೆ ಸಂಬಂಧಪಟ್ಟ ಚೆಕ್‌ ಲೀಪ್‌ ನಂ 989274 ,989278, 989279, 989371, 841423, 841424 ನ್ನು ಆರೋಪಿಯು ದಿನಾಂಕ 24-6-2026 ರಂದು ಬ್ಯಾಂಕ್‌ ಗೆ ನಗದೀಕರಣಕ್ಕಾಗಿ ಹಾಜಾರುಪಡಿಸಿದಾಗ ಬ್ಯಾಂಕ್‌ ಮೇನೆಜರ್‌ ಮತ್ತು ಸಿಬ್ಬಂದಿಯವರಿಗೆ ಅನುಮಾನ ಬಂದಾಗ ವಿಚಾರಿಸಿದಾಗ ಸರಿಯಾದ ವಿವರಣೆ ನೀಡದೆ ಇದ್ದರಿಂದ ನಗದೀಕರಣ ಮಾಡಿರುವುದಿಲ್ಲ. 

ಆರೋಪಿ ಅಕ್ಷಯ ದೇವಾಡಿಗನು  ಖಾಲಿ ಚೆಕ್‌ ಲೀಪ್ಗಳನ್ನು ನಗದೀಕರಣ ಮಾಡಿಸುವಾಗ ಅಧ್ಯಕ್ಷರ  ಗಮನಕ್ಕೆ ತಾರದೆ ಅದರಲ್ಲಿ ಅಧ್ಯಕ್ಷರ ಸಹಿಯನ್ನು ನಕಲಿಯಾಗಿ ಮಾಡಿ ಮೋಸ  ಮಾಡಲು ಪ್ರಯತ್ನಿಸಿದ್ದಾನೆ  ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಪ್ರಭಾಕರ ಬಂಗೇರ ತಿಳಿಸಿದ್ದಾರೆ.

ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ   316(2),  318 (4)  340 (2) BNS  2023  ರಂತೆ ಪ್ರಕರಣ ದಾಖಲಾಗಿದೆ.     

error: No Copying!