HLv7DMmasAEeAAU.jpg
Spread the love

ಮಂಡ್ಯ : ದಿನಾಂಕ:26-06-2026(ಹಾಯ್ ಉಡುಪಿ ನ್ಯೂಸ್) ಜಿಲ್ಲೆಯ ಮದ್ದೂರು ತಾಲೂಕಿನ ಶಿವಾರಗುಡ್ಡ ಗ್ರಾಮದಲ್ಲಿರುವ ಪಿಎಂ ಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಸಂಕಲ್ಪ ಲ್ಯಾಬ್ ಮತ್ತು ಕ್ರೀಡಾಂಗಣ ವೇದಿಕೆಯನ್ನು  ಕೇಂದ್ರ ಸಚಿವ ಶ್ರೀ ಕುಮಾರ ಸ್ವಾಮಿ ಅವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಕ್ಕಳು ಮತ್ತು ಬೋಧಕವರ್ಗ ಸಚಿವರನ್ನು ಬಹಳ ಅಕ್ಕರೆ ಮತ್ತು ಪ್ರೀತಿ ವಾತ್ಸಲ್ಯದಿಂದ ಬರಮಾಡಿಕೊಂಡರು.

ಪ್ರಧಾನಮಂತ್ರಿಗಳಾದ   ಶ್ರೀ ನರೇಂದ್ರ ಮೋದಿಯವರ  ದೂರದೃಷ್ಟಿ ನಾಯಕತ್ವದಲ್ಲಿ ಮಕ್ಕಳಿಗೆ ಗುಣಾತ್ಮಕ ಮತ್ತು ಪ್ರೇರಣಾತ್ಮಕ ಶಿಕ್ಷಣ ನೀಡಲು ಕೇಂದ್ರ ಸರಕಾರ ಕಟಿಬದ್ಧವಾಗಿದೆ. ಶಿಕ್ಷಣ ವ್ಯವಸ್ಥೆಗೆ ಅಗತ್ಯವಾದ ಗುಣಮಟ್ಟದ ಮೂಲಭೂತ ಸೌಕರ್ಯ ಒದಗಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿವಾರಗುಡ್ಡದ ನವೋದಯ ವಿದ್ಯಾಲಯವನ್ನು ಇಡೀ ರಾಜ್ಯದಲ್ಲಿಯೇ ಮಾದರಿ ವಿದ್ಯಾಲಯವನ್ನಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

error: No Copying!