ಮಣಿಪಾಲ: ದಿನಾಂಕ: 25-06-2026 (ಹಾಯ್ ಉಡುಪಿ ನ್ಯೂಸ್) ಬಾಡಿಗೆಗೆ ಪಡೆದ ಕಾರಿನ ಹಣಕಾಸಿನ ವಿಚಾರದಲ್ಲಿ ಯುವಕನೋರ್ವ ನಿಗೆ ಗಂಭೀರ ಹಲ್ಲೆ ನಡೆಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಹೊನ್ನಳ ಹಾರಾಡಿ ಗ್ರಾಮದ ನಿವಾಸಿ ಶಾ ಪೈಸಲ್ (24), ಎಂಬವರು ತಮ್ಮ ವ್ಯೆಯಕ್ತಿಕ ಕೆಲಸದ ಬಗ್ಗೆ ರಿಹಾನ್ ಉಡುಪಿ ಎಂಬವರಿಂದ ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದು ಹಾಗೂ ಸುಹಾನ್ ಎಂಬುವವರಿಂದ ಇನ್ನೊಂದು ರಿಡ್ಜ್ ಕಾರನ್ನು ಪಡೆದುಕೊಂಡಿರುತ್ತಾರೆ.
ದಿನಾಂಕ 23/06/2026 ರಂದು ರಾತ್ರಿ 9:30 ಗಂಟೆಗೆ ಕಾರಿನ ವಿಚಾರವಾಗಿ ಶಾ ಫೈಸಲ್ ರವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಸ್ಪೋಟ್ಸ್ ಸೆಂಟರ್ ಬಳಿ ಇರುವಾಗ ಸಲೀಂ , ಅನಾಸ್ , ಸುಹೈಲ್ ಎಂಬವರು ಐ -20 ಕಾರಿನಲ್ಲಿ ಬಂದು ಹಣವನ್ನು ಕೊಡು ಎಂದು ಹೇಳಿ ಶಾ ಫೈಸಲ್ ಗೆ ಕೈಯಿಂದ ಕೆನ್ನೆಗೆ ಹೊಡೆದು ಕಾಲಿನಿಂದ ಹೊಟ್ಟೆಗೆ ಬೆನ್ನಿಗೆ ತುಳಿದು ಕಾರಿನಲ್ಲಿ ತುಂಬಿಕೊಂಡು ಹೋಗುವಾಗ ಶಾ ಫೈಸಲ್ ರು ಹೆದರಿ ಬ್ರಹ್ಮಾವರ ಸೆಂಚುರಿ ಫಾರ್ಮ್ ಬಳಿಯಿರುವ ಬಿರಿಯಾನಿ ಸೆಂಟರ್ ನಲ್ಲಿರುವ ಸ್ನೇಹಿತನಾದ ಹಕೀಂ ರವರಲ್ಲಿ ಮಾತನಾಡಿ ಹಣ ನೀಡುತ್ತೇನೆ ಎಂದು ತಿಳಿಸಿದಾಗ ಅಲ್ಲಿಗೆ ಕರೆದುಕೊಂಡು ಹೋಗಿದ್ದು ನಂತರ ಅಲ್ಲಿ ಹೋಗುವಾಗ ಮಹೇಂದ್ರ ಕಂಪನಿಯ ಕಪ್ಪು ಬಣ್ಣದ ತಾರ್ ಕಾರಿನಲ್ಲಿ ಐಮಾನ್ ಹಾಗೂ ವಸೀಂ ರವರು ಬಂದು ಅವರು ಸಹ ಆರೋಪಿಗಳೊಂದಿಗೆ ಸೇರಿಕೊಂಡು ಕೈಯಿಂದ ಹೊಡೆದು ಕಾಲಿನಿಂದ ತುಳಿದು ನಂತರ ಬಿರಿಯಾನಿ ಸೆಂಟರ್‌ನ ಮಾಲಿಕ ಹಕೀಂರವರನ್ನು ಸಲೀಂ ಹಾಗೂ ಸುಹೈಲ್ ರವರು ಕರೆದುಕೊಂಡು ಬಂದು ಹಣವನ್ನು ಕೊಡಿಸುವಂತೆ ತಿಳಿಸಿದಾಗ ಹಕೀಂ ರವರು ಈ ವಿಚಾರವನ್ನು ಪೊಲೀಸ್ ಠಾಣೆಗೆ ತೆರಳಿ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದು ನಂತರ ಶಾ ಫೈಸಲ್ ರನ್ನು ಆರೋಪಿಗಳು ಉಡುಪಿಗೆ ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ಉಡುಪಿ ತಾಲೂಕು ಕಛೇರಿ ಬಳಿ ಬಿಟ್ಟು ಹೋಗಿರುತ್ತಾರೆ.
ನಂತರ ಶಾ ಫೈಸಲ್ ರನ್ನು ಚಿಕಿತ್ಸೆ ಬಗ್ಗೆ ರಿಹಾನ್ ಮತ್ತು ಹಕೀಂ ರವರು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಶಾ ಫೈಸಲ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 115(2), 137(2), 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
