images.jpeg
Spread the love

ಬಿಡದಿ: ದಿನಾಂಕ22-06-2026(ಹಾಯ್ ಉಡುಪಿ ನ್ಯೂಸ್ ) ನಮ್ಮ ತಾಯಂದಿರ ಕಣ್ಣೀರಿನ ಶಾಪ ಈ ಸರ್ಕಾರಕ್ಕೆ ಆದಷ್ಟು ಬೇಗ ತಟ್ಟಲಿದೆ ಎಂದು ನಿಖಿಲ್ ಕುಮಾರ ಸ್ವಾಮಿ ಹೇಳಿದ್ದಾರೆ.

ಎಲ್ಲೋ ದೂರದಲ್ಲಿ ಕುಳಿತು “80% ರೈತರು ಬಿಡದಿ ಟೌನ್‌ಶಿಪ್ ಯೋಜನೆಗೆ ಒಪ್ಪಿದ್ದಾರೆ” ಎಂದು ಹೇಳುವ ಮುಖ್ಯಮಂತ್ರಿಗಳೇ!

ಬನ್ನಿ, ನಮ್ಮ ರೈತ ಮಹಿಳೆಯರ ಅಳಲನ್ನು ಆಲಿಸಿ.

ಇಂದು “ಅಂಚಿಪುರ ಗ್ರಾಮದಿಂದ ಹೊಸೂರು ವರೆಗೆ” ನಡೆದ ಪಾದಯಾತ್ರೆಯ ವೇಳೆ ರೈತ ತಾಯಂದಿರು “ದಯವಿಟ್ಟು ನಮ್ಮ ಭೂಮಿ ಉಳಿಸಿಕೊಡಿ” ಎಂದು ಅಳಲು ತೋಡಿಕೊಂಡ ಕ್ಷಣಗಳಿವು.

ನಮ್ಮ ತಾಯಂದಿರ ಕಣ್ಣೀರಿನ ಶಾಪ ಈ ಸರ್ಕಾರಕ್ಕೆ ಆದಷ್ಟು ಬೇಗ ತಟ್ಟಲಿದೆ ಎಂದು ನಿಖಿಲ್ ಕುಮಾರ ಸ್ವಾಮಿ ಪಾದಯಾತ್ರೆ ವೇಳೆ ಹೇಳಿದರು.

error: No Copying!