images-7.jpeg
Spread the love

ಬೆಂಗಳೂರು: ದಿನಾಂಕ:21-06-2026(ಹಾಯ್ ಉಡುಪಿ ನ್ಯೂಸ್) ಭಾರತೀಯರು ಜಗತ್ತಿಗೆ ನೀಡಿದ ಮಹೋನ್ನತ ಕೊಡುಗೆಗಳಲ್ಲಿ ಯೋಗವೂ ಒಂದು. ಸುಮಾರು 6,000 ವರ್ಷಗಳ ಭವ್ಯ ಇತಿಹಾಸ ಯೋಗಕ್ಕಿದೆ ಎಂದು ರಾಜ್ಯ ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಡಾ.ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಯೋಗವು ಕೇವಲ ವ್ಯಾಯಾಮವಲ್ಲ; ಅದು ಆತ್ಮಶಿಸ್ತು, ಏಕಾಗ್ರತೆ, ಮಾನಸಿಕ ಸಮತೋಲನ ಮತ್ತು ಆರೋಗ್ಯಕರ ಬದುಕಿನ ಮಾರ್ಗ. ಪ್ರತಿದಿನದ ಯೋಗಾಭ್ಯಾಸವು ಒತ್ತಡವನ್ನು ಕಡಿಮೆ ಮಾಡಿ, ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿ, ಹೊಸ ಉತ್ಸಾಹ ಮತ್ತು ಸಕಾರಾತ್ಮಕತೆಯನ್ನು ತುಂಬುತ್ತದೆ.

ಅಂತಾರಾಷ್ಟ್ರೀಯ ಯೋಗ ದಿನದ ಈ ಸಂದರ್ಭದಲ್ಲಿ, ಪ್ರತಿಯೊಬ್ಬರೂ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು, ಆರೋಗ್ಯಕರ, ಸಂತುಷ್ಟ ಹಾಗೂ ಸಮತೋಲನಯುತ ಜೀವನದತ್ತ ಹೆಜ್ಜೆ ಇರಿಸೋಣ ಎಂದು ರಾಜ್ಯ ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಡಾ.ಎಂ.ಬಿ.ಪಾಟೀಲ್ ಅವರು ಜನತೆಗೆ ಯೋಗ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.

error: No Copying!