IMG_20260619_010126.jpg
Spread the love

ಬೆಂಗಳೂರು: ದಿನಾಂಕ:19-06-2026(ಹಾಯ್ ಉಡುಪಿ ನ್ಯೂಸ್) ದಲಿತರಿಗೇಕೆ ಬೇಕು RSS ವಿಷಯ” ಬಿಜೆಪಿಯ ಸಂಸದರಾದ ಶ್ರೀ ರಮೇಶ್ ಜಿಗಜಣಗಿಯವರು ಪ್ರಿಯಾಂಕ ಖರ್ಗೆ ಅವರಿಗೆ ಹೇಳಿರುವ ಮತ್ತು ಕೇಳಿರುವ ಪ್ರಶ್ನೆ.

ಇದು ವಿವಿಧ ಆಯಾಮಗಳ ವಿಮರ್ಶಿಸಬೇಕಾಗಿರುವ ಪ್ರಶ್ನೆ
ದಲಿತ ಸಮುದಾಯದವರೇ ಆಗಿರುವ ರಮೇಶ್ ಜಿಗಜಣಗಿಯವರಿಗೆ RSS ಗರ್ಭಗುಡಿಯೊಳಗೆ ಪ್ರವೇಶ ಸಿಗದಿರುವ ಹತಾಶೆಯ ಮಾತೇ? ಶ್ರೇಣೀಕೃತ ವ್ಯವಸ್ಥೆಯ ಮೂಲಭೂತವಾದವನ್ನು ನಂಬಿರುವ RSS ಸಹವಾಸಕ್ಕೆ ದಲಿತರು ಹೋಗಬೇಡಿ ಎಂಬ ಎಚ್ಚರಿಕೆಯ ಮಾತುಗಳೇ?

ಸಮಾಜದಲ್ಲಿನ ಮೇಲರಿಮೆಯ ಮನಸ್ಥಿತಿಯ ಜನರ ಹಿತಾಸಕ್ತಿ ಕಾಯಲು ರೂಪುಗೊಂಡಿರುವ RSSನ್ನು ಪ್ರಶ್ನೆ ಮಾಡಲು ದಲಿತನಾಗಿ ನಿನಗೆ ಅರ್ಹತೆ ಇಲ್ಲ ಎಂದು ನನಗೆ ಹೇಳಿರುವ ಕುಹುಕದ ಮಾತುಗಳೇ?

RSSನಂತಹ ವ್ಯವಸ್ಥೆಯನ್ನು ಸಂವಿಧಾನದ ಹಾದಿಗೆ ತರಲು ದಲಿತರಿಗೆ ಸಾಧ್ಯವಿಲ್ಲ ಎಂಬ ಹತಾಶೆಯ ಮಾತುಗಳೇ?
“RSS ತಂಟೆಗೆ ಹೋದವರು ಯಾರೂ ಉಳಿದಿಲ್ಲ” ಎಂಬ ಎಚ್ಚರಿಕೆಯನ್ನೂ ಕೊಟ್ಟಿರುವ ರಮೇಶ್ ಜಿಗಜಣಗಿಯವರು RSSನ ಭಯಕ್ಕೊಳಪಟ್ಟು ಹೇಳಿರುವುದೋ ಅಥವಾ ನನ್ನನ್ನು ಭಯಪಡಿಸಲು ಹೇಳಿರುವುದೋ?
ಈ ಬೆದರಿಕೆಯ ಹಿಂದಿರುವ ಕಾರಣಗಳೇನು? “ಯಾರೂ ಉಳಿದಿಲ್ಲ” ಎಂದರೆ ಏನರ್ಥ RSS ಭಯೋತ್ಪಾದಕ ಸಂಘಟನೆಯೇ? ಪ್ರಶ್ನಿಸುವವರನ್ನು ಮುಗಿಸುತ್ತದೆಯೇ? ಎಂದು ಪ್ರಿಯಾಂಕ ಖರ್ಗೆ ಯವರು ರಮೇಶ್ ಜಿಗಜಿಣಗಿ ಅವರಿಗೆ ಮರು ಪ್ರಶ್ನೆ ಮಾಡಿದ್ದಾರೆ.

ರಮೇಶ್ ಜಿಗಜಣಗಿಯವರೇ,
ನಾನು ಬಾಬಾ ಸಾಹೇಬರ ಸಿದ್ದಾಂತದವನು, ಪ್ರಶ್ನಿಸುವ ಧೈರ್ಯ ಮತ್ತು ವೈಚಾರಿಕತೆ ಅವರಿಂದಲೇ ಬಂದಿರುವುದು, ಬಾಬಾ ಸಾಹೇಬರನ್ನು ನಂಬಿದವರಿಗೆ “ಅಂಜಿಕೆ” ತಿಳಿದಿರುವುದಿಲ್ಲ.
ನಾನು ಸಂವಿಧಾನದ ರಕ್ಷಣೆಯ ನೆರಳಲ್ಲಿರುವವರು ಸಂವಿಧಾನದಡಿಯಲ್ಲಿ ಮಾನ್ಯತೆಯೇ ಇಲ್ಲದವರಿಗೆ ಭಯಪಡುವ ಜಾಯಮಾನ ನನ್ನದಲ್ಲ.

ನಾನು ಅಂಜುವುದು ನೈತಿಕತೆಗೆ ಹೊರತು, ಬೆದರಿಕೆಗಳಿಗಲ್ಲ, ಏಕೆಂದರೆ ನಮ್ಮದು ಅಂಬೇಡ್ಕರ್‌ರವರ ರಕ್ತ ಎಂದು ಪ್ರಿಯಾಂಕ ಖರ್ಗೆ ಯವರು ಉತ್ತರಿಸಿದ್ದಾರೆ.

error: No Copying!