ಕಾರ್ಕಳ: ದಿನಾಂಕ:17-06-2026(ಹಾಯ್ ಉಡುಪಿ ನ್ಯೂಸ್) ನಿಟ್ಟೆ ಗ್ರಾಮದ ನಿವಾಸಿ ಧರ್ಮ ಎಂಬವನು ತನ್ನ ಪತ್ನಿ ಯೊಂದಿಗೆ ಜಗಳವಾಡಿ ಕತ್ತಿಯಿಂದ ಹಲ್ಲೆ ನಡೆಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗಳು ದೂರನ್ನು ನೀಡಿದ್ದಾರೆ.
ಕಾರ್ಕಳ ನಿಟ್ಟೆ ಗ್ರಾಮದ ನಿವಾಸಿ ವಿಶಾಲಾಕ್ಷಿ (25) ಎಂಬ ವರ ಮನೆಯ ಹತ್ತಿರದಲ್ಲಿಯೇ ಅವರ ತಂದೆ ಧರ್ಮ ಮತ್ತು ತಾಯಿ ಬೇಬಿ ರವರು ವಾಸವಾಗಿದ್ದು, ವಿಶಾಲಾಕ್ಷಿ ರವರ ತಂದೆ ಪ್ರತಿದಿನ ತನ್ನ ಹೆಂಡತಿ ಬೇಬಿಯವರ ಜೊತೆ ಜಗಳ ಮಾಡುತ್ತಿದ್ದರು. ದಿನಾಂಕ 15/06/2026 ರಂದು ಸಂಜೆ ಅಪಾದಿತ ಧರ್ಮ ತನ್ನ ಹೆಂಡತಿಯ ಬಳಿ ಜಗಳ ಮಾಡಿ ಹೆಂಡತಿಯನ್ನು ಕೊಲ್ಲುತ್ತೇನೆಂದು ಹೇಳಿ ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ಕುತ್ತಿಗೆಯ ಮೇಲೆ ಕಡಿದು ಕೊಲೆ ಪ್ರಯತ್ನ ಮಾಡಿದ್ದಾನೆ.
ಕತ್ತಿಯ ಹೊಡೆತದಿಂದ ಗಂಭೀರವಾಗಿ ಗಾಯಗೊಂಡ ಗಾಯಾಳು ಬೇಬಿರವರನ್ನು ಚಿಕಿತ್ಸೆಯ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 109(1) BNS ರಂತೆ ಪ್ರಕರಣ ದಾಖಲಾಗಿದೆ.
