IMG_20260416_201545.jpg
Spread the love

ಕೋಟ: ದಿನಾಂಕ:16-06-2026(ಹಾಯ್ ಉಡುಪಿ ನ್ಯೂಸ್) ಯುವತಿ ಯೋರ್ವಳಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಆರೋಪಿ ಅಭಿಷೇಕ್‌ ಎಂಬವನು ಯುವತಿಯಿಂದ 10.83 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ರಹ್ಮಾವರ ಐರೋಡಿ ಗ್ರಾಮದ ನಿವಾಸಿ ಕು. ಎಸ್‌ ವರ್ಷಾ(23) ಎಂಬವರಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಆರೋಪಿ ಅಭಿಷೇಕ್ ಎಂಬವನು ದಿನಾಂಕ 31.10.2025 ರಿಂದ   ದಿನಾಂಕ  28.05.2026  ರ ವರೆಗೆ   ಕು.ಎಸ್ ವರ್ಷಾ ರ   ಖಾತೆ ಮತ್ತು  ಪೋನ್ ಪೇ ಹಾಗೂ ಗೂಗಲ್‌ ಪೇ  ಮುಖಾಂತರ   ಒಟ್ಟು  ರೂ 10,83,000/-  ಹಣವನ್ನು  ಹಾಕಿಸಿಕೊಂಡಿರುತ್ತಾನೆ.

ಆರೋಪಿಯು ಕು.ಎಸ್ ವರ್ಷಾ ರಿಂದ ಒಟ್ಟು  ರೂ 10,83,000/-  ಹಣವನ್ನು   ಪಡೆದು ಕೊಂಡು  ಸರಕಾರಿ  ಕೆಲಸವನ್ನು  ಕೊಡಿಸದೇ    ಪಡೆದುಕೊಂಡ  ಹಣವನ್ನು  ಸಹ ವಾಪಾಸು  ನೀಡದೇ    ಮೋಸ  ಮಾಡಿರುತ್ತಾನೆ   ಈಗ  ಕೆಲಸ ಕೊಡಿಸು  ಇಲ್ಲವಾದರೆ  ಹಣ  ವಾಪಾಸು  ಕೊಡು ಎಂದು ಕೇಳಿದರೇ ಅವಾಚ್ಯ  ಶಬ್ದದಿಂದ  ಬೈದು  ಜೀವ  ಬೆದರಿಕೆ  ಹಾಕಿರುತ್ತಾನೆ ಎಂದು ಕು.ಎಸ್ ವರ್ಷಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 316(2)318(4),352,351(2)  BNS ರಂತೆ ಪ್ರಕರಣ ದಾಖಲಾಗಿದೆ.  

error: No Copying!