istockphoto-512682596-612x612.jpg
Spread the love

ಬೈಂದೂರು: ದಿನಾಂಕ 16/06/2026 (ಹಾಯ್ ಉಡುಪಿ ನ್ಯೂಸ್) ತೊಂಡೆಮಕ್ಕಿ ನಿವಾಸಿ ರಾಘವೇಂದ್ರ ದೇವಾಡಿಗ ಎಂಬವರಿಗೆ ಸ್ಥಳೀಯ ನಾಲ್ವರು ವ್ಯಕ್ತಿಗಳು ಮಾತನಾಡಲಿದೆ ಎಂದು ಕರೆಸಿ ಗಂಭೀರ ಹಲ್ಲೆ ನಡೆಸಿರುವ ಘಟನೆ ತೊಂಡೆಮಕ್ಕಿ ಎಂಬಲ್ಲಿ ನಡೆದಿದೆ.

ಬೈಂದೂರು ತೊಂಡೆಮಕ್ಕಿ ಸೂರ್ಕುಂದ ನಿವಾಸಿ ರಾಘವೇಂದ್ರ ದೇವಾಡಿಗ (26) ಎಂಬವರು ದಿನಾಂಕ :12-06-2026 ರಂದು ಮನೆಯಲ್ಲಿದ್ದಾಗ ಆರೋಪಿ ರಾಜೇಶ್‌ ನು ಪ್ರದೀಪ್‌ ಎಂಬವನ ಮೊಬೈಲ್‌ ನಲ್ಲಿ ರಾಘವೇಂದ್ರ ದೇವಾಡಿಗ ರಿಗೆ ಕರೆ ಮಾಡಿ ನಿನ್ನ ಹತ್ತಿರ ಮಾತನಾಡಬೇಕು ತೊಂಡೆಮಕ್ಕಿ ಶಾರದಾ ವೇದಿಕೆಯ ಬಳಿ ಬರಲು ತಿಳಿಸಿದ್ದು ರಾಘವೇಂದ್ರ ದೇವಾಡಿಗ ರು ಮದ್ಯಾಹ್ನ 3:45 ಗಂಟೆಗೆ ಆರೋಪಿ ತಿಳಿಸಿದ ಶಾರದಾ ವೇದಿಕೆಯ ಬಳಿ ಬಂದಾಗ ಅಲ್ಲಿ ಆರೋಪಿಗಳಾದ 1.ಪ್ರದೀಪ್‌ ಶೆಟ್ಟಿ , 2. ರಾಜೇಶ್‌ ದೇವಾಡಿಗ, 3.ಪ್ರಶಾಂತ ಮೋಗವೀರ, 4.ನಾಗರಾಜ ದೊಂಬೆ ಇದ್ದು ಅವರುಗಳು ರಾಘವೇಂದ್ರ ದೇವಾಡಿಗ ರಿಗೆ ಹಲ್ಲೆ ಮಾಡುವ  ಉದ್ದೇಶದಿಂದ ಸೇರಿಕೊಂಡು ಏಕಾಏಕಿ ರಾಘವೇಂದ್ರ ದೇವಾಡಿಗ ರನ್ನು ಸುತ್ತುವರಿದು ಕಾಲರ್‌ ಹಿಡಿದು  ಅಡ್ಡಗಟ್ಟಿ ಕೈಯಿಂದ ಮುಖಕ್ಕೆ ಕೆನ್ನೆಗೆ ಹಲ್ಲೆ ನಡೆಸಿದ್ದು ಆರೋಪಿಗಳ ಪೈಕಿ ನಾಗರಾಜನು ಆತನು ಧರಿಸಿದ್ದ ಬಳೆಯಿಂದ ( ಖಡ್ಗ) ರಾಘವೇಂದ್ರ ದೇವಾಡಿಗ ರ ಬೆನ್ನಿಗೆ ಕೈಬಳೆಯಿಂದ ಮುಷ್ಟಿಕಟ್ಟಿ ಗುದ್ದಿ ಹಲ್ಲೆ ಮಾಡಿದ್ದಾರೆ.

ದಿನಾಂಕ 11/06/2026 ರಂದು ರಾಘವೇಂದ್ರ ದೇವಾಡಿಗ ತನ್ನ ಪರಿಚಯದ ಆರೋಪಿ ನಾಗರಾಜನಲ್ಲಿ ಪ್ರದೀಪ್‌ ಶೆಟ್ಟಿಯೊಂದಿಗೆ ಸೇರಬೇಡ ಎಂದು ಹೇಳಿದ್ದು ಈ ವಿಚಾರವನ್ನು ನಾಗರಾಜನು, ಪ್ರದೀಪ್‌ ಶೆಟ್ಟಿಯಲ್ಲಿ ಹೇಳಿರುವುದರಿಂದ ಪ್ರದೀಪ್‌ ಶೆಟ್ಟಿಯು ಇತರರೊಂದಿಗೆ ಸೇರಿ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ರಾಘವೇಂದ್ರ ದೇವಾಡಿಗ ರು ಹಲ್ಲೆಯಿಂದಾಗಿರುವ ನೋವಿನಿಂದಾಗಿ ಮಂಗಳೂರು ವೆನಲಾಕ್‌ ನಲ್ಲಿ ಚಿಕಿತ್ಸೆಯಲ್ಲಿದ್ದು ಈ ದಿನ ಘಟನೆಯ ಕುರಿತು ದೂರು ನೀಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 118 (1), 115 (2), 126 (2) ಜೊತೆಗೆ 3 (5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!