gettyimages-2218171170-612x612.jpg
Spread the love

ಉಡುಪಿ: ದಿನಾಂಕ:16-06-2026(ಹಾಯ್ ಉಡುಪಿ ನ್ಯೂಸ್) ಡೆಬಿಟ್ ಕಾರ್ಡ್ ಮೂಲಕ ಆಸ್ಪತ್ರೆಯ ಬಿಲ್ ಪಾವತಿ ಮಾಡಿದ್ದ ವ್ಯಕ್ತಿ ಯ ಖಾತೆಯಿಂದ 2.13 ಲಕ್ಷ ರೂಪಾಯಿ ಬೇರೆಯವರ ಖಾತೆಗೆ ವರ್ಗಾವಣೆ ಮಾಡುವ ಮೂಲಕ ವಂಚನೆ ನಡೆಸಿದ್ದಾರೆ ಎಂದು ನೊಂದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ನಿವಾಸಿ ಸುರೇಶ್‌ ರಾವ್‌ ಎಂಬವರು ದಿನಾಂಕ 03/06/2026 ರಂದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ಆಸ್ಪತ್ರೆಯ ಬಿಲ್ ನ್ನು ಡೆಬಿಟ್ ಕಾರ್ಡ್ ಮುಖಾಂತರ ಹಣವನ್ನು ಪಾವತಿ ಮಾಡಿರುತ್ತಾರೆ. ಇದಾದ ನಂತರ ಸುರೇಶ್ ರಾವ್ ರವರು ಯಾವುದೇ ಹಣದ ವ್ಯವಹಾರವನ್ನು ನಡೆಸದೇ ಇದ್ದು, ದಿನಾಂಕ 08/06/2026 ರಂದು ಸುರೇಶ್ ರಾವ್ ರಿಗೆ ಹಣ ಖಡಿತಗೊಂಡಿರುವ ಬಗ್ಗೆ ಸಂದೇಶ ಬಂದಿದ್ದು, ಈ ವಿಚಾರವಾಗಿ ಬ್ಯಾಂಕ್ ಗೆ ತೆರಳಿ ಟ್ರ್ಯಾನ್ಸಕ್ಷನ್ ವಿವರವನ್ನು ಪರಿಶೀಲಿಸಿದಾಗ ಸುರೇಶ್ ರಾವ್ ರವರ ಗಮನಕ್ಕೆ ಬಾರದೇ ಅವರ ಖಾತೆಯಿಂದ ದಿನಾಂಕ 05/06/2026 ರಿಂದ ದಿನಾಂಕ 08/06/2026 ರ ಮಧ್ಯಾವಧಿಯಲ್ಲಿ ಒಟ್ಟಾರೆಯಾಗಿ 2,12,497/- ರೂಪಾಯಿಗಳು ಯಾವುದೋ ಖಾತೆಗೆ ವರ್ಗಾವಣೆ ಆದ ಬಗ್ಗೆ ತಿಳಿದುಬಂದಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 66(D) IT ACT ರಂತೆ ಪ್ರಕರಣ ದಾಖಲಾಗಿದೆ.

error: No Copying!