ದಿನಾಂಕ:15-06-2026(ಹಾಯ್ ಉಡುಪಿ ನ್ಯೂಸ್)
ಬೆಂಗಳೂರು: ಸತ್ಯ ಕೊನೆಗೂ ಹೊರಬಂದಿದೆ! ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ಸಂಪೂರ್ಣವಾಗಿ ಮರುಅರ್ಜಿ ಸಲ್ಲಿಸಲು ಸಿಎಂ ಶ್ರೀ ಡಿಕೆ ಶಿವಕುಮಾರ್ ಅವರು ನೀಡಿರುವ ಆದೇಶ, ಕಳೆದ 3 ವರ್ಷಗಳ ಶ್ರೀ ಸಿದ್ಧರಾಮಯ್ಯ ಅವರ ನೇತೃತ್ವದ ಆಡಳಿತದ ಮಹಾವೈಫಲ್ಯಕ್ಕೆ ಅವರದ್ದೇ ಸರ್ಕಾರ ನೀಡಿದ ಅಧಿಕೃತ ಸಾಕ್ಷಿಯಾಗಿದೆ ಎಂದು ನಿಖಿಲ್ ಕುಮಾರ ಸ್ವಾಮಿ ಹೇಳಿದ್ದಾರೆ.
ಯೋಜನೆಗಳ ಉಸ್ತುವಾರಿ ಹೆಸರಿನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿದ್ದ 4,580 ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರ ₹23.32 ಕೋಟಿ ತೆರಿಗೆ ಹಣವನ್ನು ಸಂಬಳದ ರೂಪದಲ್ಲಿ ಲೂಟಿ ಮಾಡಿದ್ದನ್ನು ಬಿಟ್ಟರೆ ಸಾಧಿಸಿದ್ದಾದರೂ ಏನು? ಸ್ವಪಕ್ಷದ ಕಾರ್ಯಕರ್ತರ ಜೇಬು ತುಂಬಿಸಲು ಜನರ ಹಣ ಪೋಲು ಮಾಡಿ, ಈಗ ಹಗಲಿರುಳು ದುಡಿಯುವ ಜನಸಾಮಾನ್ಯರನ್ನು ಮತ್ತೆ ಕ್ಯೂ ನಿಲ್ಲಿಸುತ್ತಿರುವುದು ಈ ಸರ್ಕಾರದ ಆಡಳಿತ ದುರಂತಕ್ಕೆ ಹಿಡಿದ ಕೈಗನ್ನಡಿ.
ಮಾನ್ಯ ಡಿಕೆ ಶಿವಕುಮಾರ್ ಕೇವಲ ಮರು ಅರ್ಜಿಗೆ ಆದೇಶಿಸಿಲ್ಲ; ಬದಲಿಗೆ ಹಿಂದಿನ ಸಿಎಂ ಶ್ರೀ ಸಿದ್ದರಾಮಯ್ಯ ಅವರ ಆಡಳಿತ ವೈಫಲ್ಯಕ್ಕೆ ಅವರೇ ಅಧಿಕೃತವಾಗಿ ನೀಡಿದ “ಪ್ರಗತಿ ಪತ್ರ” ಇದಾಗಿದೆ: ಸಂಪೂರ್ಣ ವೈಫಲ್ಯ! ಎಂದು ನಿಖಿಲ್ ಕುಮಾರ ಸ್ವಾಮಿ ಹೇಳಿದ್ದಾರೆ.
