IMG_20260615_145130.jpg
Spread the love

ಮಲ್ಪೆ: ದಿನಾಂಕ :15-06-2026(ಹಾಯ್ ಉಡುಪಿ ನ್ಯೂಸ್)

ಉಡುಪಿ: ಕೊಡವೂರು ಗ್ರಾಮದ ನಿವಾಸಿ ಪ್ರಕಾಶ್‌.ಜಿ (56) ಇವರು ಉಡುಪಿ ತಾಲೂಕು ಕೊಡವೂರು ಗ್ರಾಮದ ಶ್ರೀ ಮಹಾತೋಭಾರ ಶ್ರೀ ಶಂಕರನಾರಾಯಣದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿದ್ದು, ದೇವಸ್ಥಾನದ ಮಹಾರುದ್ರಯಾಗ ನಡೆಯುವ ಸಮಯ ಪೌರೋಹಿತ್ಯಕ್ಕೆ ಸಂಬಂಧಿಸಿದಂತೆ ಮೇಲ್ವಚಾರಣೆ ಹಾಗೂ ಉಸ್ತುವಾರಿಯಾಗಿದ್ದ ವೆಂಕಟಕೃಷ್ಣ (49) ರವರು ದಿನಾಂಕ 12/06/2026 ರಂದು ಬೆಳಿಗ್ಗೆ 08:00 ಗಂಟೆಗೆ ಉಡುಪಿ ತಾಲೂಕು ಕೊಡವೂರು ಗ್ರಾಮದ ಕೆರೆಕಟ್ಟೆ ಗಣಪತಿ ದೇವಸ್ಥಾನದಿಂದ ಹೋಗಿದ್ದು ದೇವಸ್ಥಾನಕ್ಕೆ ವಾಪಾಸು ಬಾರದೇ ಮನೆಗೂ ಹೋಗದೆ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!