ಕಾರ್ಕಳ: ದಿನಾಂಕ: 15-06-2026 (ಹಾಯ್ ಉಡುಪಿ ನ್ಯೂಸ್) ನಿಟ್ಟೆ ಗ್ರಾಮದ ಟೆಂಪೋ ಚಾಲಕ ರೋರ್ವರನ್ನು ಕಾರೊಂದರಲ್ಲಿ ಬಂದ ಇಬ್ಬರು ವ್ಯಕ್ತಿಗಳು ತಡೆದು ನಿಲ್ಲಿಸಿ ಬ್ಯಾಟಿನಿಂದ ಹಲ್ಲೆ ನಡೆಸಿರುವ ಘಟನೆ ಧೂಪದಕಟ್ಟೆ ಎಂಬಲ್ಲಿ ನಡೆದಿದೆ.
ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಮೊಹಮ್ಮದ್ ಶಬೀಬ್ (24) ಎಂಬವರು ದಿನಾಂಕ 12/06/2026 ರಂದು ಟೆಂಪೋ KA20AD1172 ರಲ್ಲಿ ತನ್ನ ತಮ್ಮ ಅಬ್ದುಲ್ ಮಲಿಕ್ ಎಂಬವರೊಂದಿಗೆ ನಿಟ್ಟೆಯಿಂದ ಬೆಂಗಳೂರಿಗೆ ಹೊರಟಿದ್ದು, ಆ ಸಮಯ ಅಪಾದಿತ ಮಹಮ್ಮದ್ ಹುನೈಸ್ ಎಂಬಾತನು ಅನೀಸ್ ಮತ್ತು ಶಿಯಾನ್ ಎಂಬವರೊಂದಿಗೆ ಕಾರು KA36M9449 ರಲ್ಲಿ ಮೊಹಮ್ಮದ್ ಶಬೀಬ್ ರ ಟೆಂಪೋವನ್ನು ಹಿಂಬಾಲಿಸಿಕೊಂಡು ಬಂದು ಹೊಡೆಯುತ್ತೇನೆಂದು ಬ್ಯಾಟ್ ತೋರಿಸಿದ್ದು ಮೊಹಮ್ಮದ್ ಶಬೀಬ್ ರು ಹೆದರಿ ವಾಪಾಸು ಮನೆಗೆ ಹೋಗಲು ತನ್ನ ವಾಹನವನ್ನು ತಿರುಗಿಸಿ ವಾಪಾಸು ಹೋಗುತ್ತಾ ಬೆಳಿಗ್ಗೆ 07:45 ಗಂಟೆಗೆ ನಿಟ್ಟೆ ಗ್ರಾಮದ ದೂಪದಕಟ್ಟೆ ಹತ್ತಿರ ತಲುಪುವಾಗ ಅಪಾದಿತನು ಕಾರನ್ನು ಮೊಹಮ್ಮದ್ ಶಬೀಬ್ ರ ವಾಹನಕ್ಕೆ ಡಿಕ್ಕಿ ಹೊಡೆದು ನಿಲ್ಲಿಸಿ ಕಾರಿನಿಂದ ಇಳಿದು ಮೊಹಮ್ಮದ್ ಶಬೀಬ್ ರ ವಾಹನದ ಗಾಜನ್ನು ಬ್ಯಾಟಿನಿಂದ ಒಡೆದು ಮೊಹಮ್ಮದ್ ಶಬೀಬ್ ರಿಗೆ ಅವಾಚ್ಯ ಶಬ್ದಗಳಿಂದ ಬೈದು ಬ್ಯಾಟಿನಿಂದ ಹೊಡೆದು, ಎಳೆದು ಕಾಲಿನಿಂದ ತುಳಿದು ಕೊಲ್ಲುವುದಾಗಿ ಜೀವಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 126(2), 115(2), 118(1),352, 351, ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
