ಕುಂದಾಪುರ: ದಿನಾಂಕ: 12/06/2026 (ಹಾಯ್ ಉಡುಪಿ ನ್ಯೂಸ್) ಕಾವ್ರಾಡಿ ಗ್ರಾಮದ ಚರ್ಚ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ ಬಿ ಎಸ್ ಅವರು ಬಂಧಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ್ ಗೌಡ ಬಿ ಎಸ್, ಅವರು ದಿನಾಂಕ :11-06-2026 ರಂದು ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ಕಾವ್ರಾಡಿ ಗ್ರಾಮದ ಚರ್ಚ್ ಬಳಿ ಇರುವ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಮಧ್ಯಪಾನ ಮಾಡುತ್ತಿದ್ದ ಪ್ರಭಾಕರ ಶೆಟ್ಟಿ (65), ಕೆಂಚನೂರು ಗ್ರಾಮ ಎಂಬಾತನಿಂದ 1] 90 ಎಂ.ಎಲ್.ನ HAYWARDS ಮದ್ಯದ ಟೆಟ್ರಾಪ್ಯಾಕ್-1 , 2) 90 ಎಂ.ಎಲ್.ನ HAYWARDS ಮದ್ಯದ ಖಾಲಿ ಟೆಟ್ರಾ ಪ್ಯಾಕ್-1, 3] ಪ್ಲಾಸ್ಟಿಕ್ ಗ್ಲಾಸ್, 4) ಖಾಲಿ ಪ್ಲಾಸ್ಟಿಕ್ ಬಾಟಲಿ-1 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 15(A) KE ACT ರಂತೆ ಪ್ರಕರಣ ದಾಖಲಾಗಿದೆ.
