IMG-20260608-WA0013.jpg
Spread the love

ಬೆಂಗಳೂರು : ದಿನಾಂಕ: 09-06-2026 (ಹಾಯ್ ಉಡುಪಿ ನ್ಯೂಸ್) ನಮ್ಮ ಕರ್ನಾಟಕ ಸೇನೆಯ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಸುಜಯ್ ಪೂಜಾರಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಶೆಟ್ಟಿರವರನ್ನು ರಾಜ್ಯಾಧ್ಯಕ್ಷರಾದ ಶ್ರೀ ಎಂ ಬಸವರಾಜ ಪಡುಕೋಟೆ ಯವರು ನೇಮಕಗೊಳಿಸಿ ಅದೇಶ ಹೊರಡಿಸಿರುತ್ತಾರೆ.

ಉಡುಪಿ ಸಂಘಟನೆಯನ್ನು ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿರವರ ನೇತೃತ್ವದಲ್ಲಿ ಮುನ್ನಡೆಸಿಕೊಂಡು ಹೋಗುವಂತೆ ಬೆಂಗಳೂರು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೂಚನೆ ನೀಡಿರುತ್ತಾರೆ. 

ನಮ್ಮ ಕರ್ನಾಟಕ ಸೇನೆಯ ನೂತನ ಜಿಲ್ಲಾ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಲಕ್ಷ್ಮೀಶ ಶೆಟ್ಟಿ. ಜಿಲ್ಲಾ ಉಪಾಧ್ಯಕ್ಷರಾಗಿ ಆನಂದ್ ಶೆಟ್ಟಿ ಹಾಗೂ ನಾಗರಾಜ್. ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾಗಿ ಪ್ರಸಾದ್. ಜಿಲ್ಲಾ ಗೌರವ ಸಲಹೆಗಾರರಾಗಿ ಪ್ರಕಾಶ್ ದೇವಾಡಿಗ. ಜಿಲ್ಲಾ ಕಾರ್ಯದರ್ಶಿಯಾಗಿ ಸರ್ವೋತ್ತಮ್. ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ್ ಆಚಾರ್ಯ ಅವರನ್ನು ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಯವರು ನೇಮಕಗೊಳಿಸಿ ಆದೇಶ ಹೊರಡಿಸಿರುತ್ತಾರೆ.

ಈ ಸಂದರ್ಭದಲ್ಲಿ ಕರವೇ ರಾಜ್ಯ ಉಪಾಧ್ಯಕ್ಷರಾದ ಅನಿಲ್ ಬಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

error: No Copying!