IMG-20260607-WA0161.jpg
Spread the love

ದಿನಾಂಕ:08-06-2026(ಹಾಯ್ ಉಡುಪಿ ನ್ಯೂಸ್)

ಕಾಪು: ದಂಡತೀರ್ಥ ಶಾಲಾ ಮೈದಾನದಲ್ಲಿ ಗ್ರಾಮೀಣ ಮಟ್ಟದ ಆಟಗಾರರಿಗಾಗಿ BFC ಪೊಲಿಪು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಕೂಟ ಭರ್ಜರಿಯಾಗಿ ಯಶಸ್ವಿಯಾಯಿತು.

BFC ಸೀಸನ್ 2 ಹೆಸರಿನಲ್ಲಿ ನಡೆದ ಪಂದ್ಯಾಕೂಟದಲ್ಲಿ ಭಾಗವಹಿಸಲು ದೇಶ ವಿದೇಶಗಳಿಂದ ಸ್ಥಳೀಯ ಆಟಗಾರರು ಆಗಮಿಸಿ ಮೈದಾನದಲ್ಲಿ ತಮ್ಮ ಅದ್ಬುತ ಕೌಶಲ್ಯ ಪ್ರದರ್ಶನವನ್ನು ನೀಡಿದ್ದು ಪಂದ್ಯಕೂಟದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತು.

ಫೈನಲ್ ನಲ್ಲಿ ಅಯನ್ ಫ್ರೆಂಡ್ಸ್ ತಂಡವು B ಟೀಮ್ ವಿರುದ್ಧ ರೋಚಕ ಹಣಾಹಣಿಯಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. B ಟೀಮ್ ತಂಡವು ಉತ್ತಮ ಪ್ರದರ್ಶನ ನೀಡಿ ರನ್ನರ್ ಟ್ರೋಫಿ ಪಡೆದುಕೊಂಡಿತು.

ರೋಚಕ ಫೈನಲ್ ನಲ್ಲಿ B ಟೀಮ್ ತಂಡವನ್ನು ಮಣಿಸಿ ಅದ್ಭುತ ಆಟ ಪ್ರದರ್ಶಿಸಿದ ಆಸೀಫ್ ಭಾಯ್ ಮಾಲಕತ್ವದ ಅಯನ್ ಫ್ರೆಂಡ್ಸ್ ಕಾಪು ತಂಡವು BFC ಸೀಸನ್ 2 2026ರ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಎಲ್ಲಾ ಹಂತಗಳಲ್ಲಿ ಶಿಸ್ತಿನ ಆಟ, ದಿಟ್ಟ ಬ್ಯಾಟಿಂಗ್, ನಿಖರ ಬೌಲಿಂಗ್ ಅದ್ಭುತ ಕ್ಷೇತ್ರ ರಕ್ಷಣೆ ಪ್ರದರ್ಶಿಸಿದ ಆಯನ್ ಫ್ರೆಂಡ್ಸ್ ತಂಡವು ಎದುರಾಳಿಯನ್ನು ಮಣಿಸುತ್ತಾ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಫೈನಲ್ ನಲ್ಲಿ ತೋರಿಸಿದ ಸಮರ್ಪಣೆ,ಒಗ್ಗಟ್ಟು ಮತ್ತು ಗೆಲ್ಲುವ ಹುಮ್ಮಸ್ಸು ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಿತ್ತು.

ಇದಕ್ಕೂ ಮೊದಲು ನಡೆದ ಪಂದ್ಯಾಟದಲ್ಲಿ B ಟೀಮ್ ತಂಡವು ಟೇಬಲ್ ಟಾಪರ್ ಆಗಿ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದರೆ ಇನ್ನೊಂದೆಡೆ ಕ್ವಾಲಿಫಯರ್ ನಲ್ಲಿ ಬಜಾರ್ ಪ್ರೆಂಡ್ಸ್ ಅನ್ನು ಮಣಿಸಿ ಆಯನ್ ಫ್ರೆಂಡ್ಸ್ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿತು.

ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಬೀರ್ ರವರು ಅರ್ಹವಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು.

ಆಟಗಾರರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು, ಯುವ ನಾಯಕರಾದ MY 3 ಅಶ್ರಫ್ ರವರ ಮುಂದಾಳತ್ವದಲ್ಲಿ ಬಹಳ ಅದ್ದೂರಿಯಾಗಿ, ಶಿಸ್ತುಬದ್ಧವಾಗಿ ನಡೆದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

error: No Copying!