photo-1623522264952-8dff960ec8f2.jpeg
Spread the love

ಹೆಬ್ರಿ: ದಿನಾಂಕ:07-06-2026(ಹಾಯ್ ಉಡುಪಿ ನ್ಯೂಸ್) ಗ್ರಾಮದ ಹೊಸೂರು ಎಂಬಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜುಗಾರಿ ಅಡ್ಡೆಗೆ ಕಾರ್ಕಳ ಪೊಲೀಸ್ ವ್ರತ್ತ ನಿರೀಕ್ಷಕರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ದಿನಾಂಕ 06/06/2026 ರಂದು  ಸಂಜೆ  ಹೆಬ್ರಿ ಗ್ರಾಮದ ಹೊಸೂರು  ಎಂಬಲ್ಲಿ    ಇಸ್ಪೀಟು  ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಮಾನ್ಯ ಪೊಲೀಸ್‌ ಉಪಾಧೀಕ್ಷಕರು ಕಾರ್ಕಳ ಉಪ ವಿಭಾಗ ರವರಿಗೆ  ಬಂದ ಸಾರ್ವಜನಿಕ ಮಾಹಿತಿಯಂತೆ ಅವರು ಪೊಲೀಸ್‌ ವೃತ್ತ ನಿರೀಕ್ಷಕರು ಕಾರ್ಕಳ ವೃತ್ತರವರಿಗೆ  ಮಾಹಿತಿ ಬಂದ ಸ್ಥಳಕ್ಕೆ ದಾಳಿ ಮಾಡುವ ಬಗ್ಗೆ  ಆದೇಶದ ನೀಡಿದ ಮೇರೆಗೆ ವೃತ್ತ ನಿರೀಕ್ಷಕರು ಕೂಡಲೇ ಹೆಬ್ರಿಗೆ ಬಂದು ಸಿಬ್ಬಂದಿಗಳ ಜೊತೆಯಲ್ಲಿ   ಹೆಬ್ರಿ ತಾಲೂಕು ಹೊಸೂರು ಎಂಬಲ್ಲಿ ಚಪ್ಪರ  ಹಾಕಿ  ಮೇಲ್ಗಡೆ ಟರ್ಪಾಲ್  ಹಾಸಿ  ಮದ್ಯದಲ್ಲಿ ಒಂದು ವಿದ್ಯುತ್  ಬಲ್ಟ್ ಅಳವಡಿಸಿ   ಟೇಬಲ್ ಮೇಲೆ  ಬಟ್ಟೆಯನ್ನು ಹಾಸಿ  ಸುತ್ತಲೂ ಕುಳಿತು ಅದರ ಮೇಲೆ ಹಣವನ್ನು ಪಣವಾಗಿ ಇಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಎಂದು ಹೇಳುತ್ತಾ ಹಣವನ್ನು ಪಣವಾಗಿ ಒಡ್ಡುತ್ತಾ ಜೂಜಾಟವನ್ನು  ಆಟವಾಡುತ್ತಿದ್ದ  ಸ್ಥಳಕ್ಕೆ ದಾಳಿ ಮಾಡಿ ವಿಜೇಶ್‌ , ದಸ್ತಗೀರ್‌,  ರೋಹಿತ್‌ ಎಂಬ ಮೂವರನ್ನು ಹಿಡಿದು ಬಂಧಿಸಿದ್ದಾರೆ.

ಬಂದಿತ ಆರೋಪಿಗಳನ್ನು ವಿಚಾರಣೆ ನಡೆಸಿದಾಗ   ಇಸ್ಟೀಟು ಜುಗಾರಿ ಆಟ ನಡೆಸುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದು ಮತ್ತು 1. ನಿತಿನ್ ಮಂಗಳೂರು   2. ಮಂಗಳೂರಿನ ಪಡು  3. ಕಿಶೋರ್ ಪಂಪ್ವೆಲ್ 4. ಮೂಲ್ಕಿ  ಸಿದ್ದು ಶೆಟ್ಟಿ  5. ಮೂಲ್ಕಿ  ರಂಗನಾಥ 6. ಮೂಲ್ಕಿ ರಪೀಕ್ 7. ನಿತಿನ್ ಮಂಗಳೂರು  8. ನಜೀರ್ ಬೆಳ್ತಂಗಡಿ 9. ಚೇತನ ಬರ್ಕೆ 10. ಕಿಶೋರ್ ಪಾಂಗಾಳ  11. ವಿಜಯ ಶೆಟ್ಟಿ ಕಾರ್ಕಳ 12. ಮಹೇಶ್ ಜಾರ್ಕಳ 13. ಮಹಾದೇವ ನಾಯ್ಕ ಭಟ್ಕಳ 14. ಮೂಲ್ಕಿಯ  ಇಮ್ರಾನ್ ಮತ್ತು 15. ಕಾರಿನ ಚಾಲಕ  ಹಾಗೂ ಇತರರು ಅಲ್ಲಿಂದ ಓಡಿಹೋಗಿದ್ದು ಹಾಗೂ ಜೂಜಾಟಕ್ಕೆ ಬಳಸಿದ ನಗದು 23,970/- ರೂ ಹಣ ಹಾಗೂ 35,000/- ರೂ ಮೌಲ್ಯದ  ವಿಜೇಶ್‌ ಬಳಿ ಇದ್ದ 2 ಮೊಬೈಲ್‌ ಹಾಗೂ ದಸ್ತಗೀರ್‌ ಹಾಗೂ ರೋಹಿತ್‌ ಬಳಿ ಇದ್ದ ತಲಾ ಒಂದೊಂದು ಮೊಬೈಲ್‌ಗಳನ್ನು ,  ಇಸ್ಟೀಟು ಕಾರ್ಡ್‌ಗಳು ,ಹಾಗೂ ಟೇಬಲ್‌ , ಹಾಗೂ ಕುರ್ಚಿಗಳನ್ನು ಹಾಗೂ ವಿದ್ಯುತ್‌ ಬೆಳಕಿಗಾಗಿ ಮಾಡಿಕೊಂಡ ಬ್ಯಾಟರಿ ಹಾಗೂ ಅದರ ಪರಿಕರಗಳನ್ನು ಮತ್ತು ಇಸ್ಪೀಟು ಜೂಜಾಜಟಕ್ಕೆ ಬರಲು ಬಳಸಿದ 5,00,000-00 ರೂ ಮೌಲ್ಯದ  KA-20-P-9531 ನೇ ಸ್ವಿಪ್ಟ್ ಡಿಸೈರ್ ಕಾರು 35,000-00 ರೂ ಮೌಲ್ಯದ KA-20-ES-6771 ನೇ  ಹೊಂಡಾ ಕಂಪೆನಿಯ  ಕಪ್ಪು ಬಣ್ಣದ  ಸಿ,ಡಿ 100 ಮೋಟಾರ್ ಸೈಕಲ್  ಮತ್ತು 40,000-00 ರೂ ಮೌಲ್ಯದ KA-20-EX-2001 ನೇ  ಹಿರೋ ಪ್ಯಾಸನ್  ಮೋಟಾರ್ ಸೈಕಲ್   4,50,000-00 ರೂ ಮೌಲ್ಯದ  KA-70-M-9181  ನೇ  ನೀಲಿ ಬಣ್ಣದ ಸ್ವಿಪ್ಟ್ ಕಾರು  50,000-00 ಮೌಲ್ಯದ  KA-20-EZ-110 ನೇ  ಸ್ಕೂಟಿ  ಮತ್ತು 1,50,000-00 ರೂ ಮೌಲ್ಯದ  KA-05-MG-7820 ನೇ  ಮಾರುತಿ ಆಲ್ಟೋ ಕಾರನ್ನು  ಸ್ವಾಧೀನಪಡಿಸಿ   ವಶಪಡಿಸಿಕೊಂಡ ಎಲ್ಲಾ ಸ್ವತ್ತುಗಳ ಒಟ್ಟು ಕ್ರೋಡಿಕೃತ ಅಂದಾಜು ಮೌಲ್ಯ 13,07,370/- ರೂಪಾಯಿಗಳು ಆಗಬಹುದೆಂದು ಅಂದಾಜಿಸಲಾಗಿದೆ .

ಆರೋಪಿತರುಗಳು ಲಘು  ವ್ಯವಸ್ಥಿತವಾಗಿ ಅಪರಾದ ಜಾಲ ನಿರ್ಮಿಸಿಕೊಂಡು ಚಪ್ಪರದಲ್ಲಿ  ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಟೀಟು ಜುಗಾರಿ ಆಟದಲ್ಲಿ ತೊಡಗಿದ್ದರು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ  ಕಲಂ: 80  KP ACT ಕಲಂ  112 ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.

error: No Copying!