ಕಾರ್ಕಳ: ದಿನಾಂಕ : 06/06/2026 (ಹಾಯ್ ಉಡುಪಿ ನ್ಯೂಸ್) ಆರ್.ಟಿ.ಓ ಹೆಸರಲ್ಲಿ ವಾಟ್ಸಪ್ ಸಂದೇಶ ಕಳುಹಿಸಿ 5 ಲಕ್ಷದ 64000 ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ನಿವಾಸಿ ವಾಸುದೇವ ಎಂಬವರಿಗೆ ದಿನಾಂಕ:04-06-2026 ರಂದು RTO ಹೆಸರಲ್ಲಿ ಪಿಡಿಎಫ್ ವಾಟ್ಸಾಪ್ ಸಂದೇಶ ಬಂದಿರುವುದನ್ನು ಓಪನ್ ಮಾಡಲು ನೋಡಿದಾಗ ಓಪನ್ ಆಗದೇ ಇದ್ದು, ನಂತರ ಹಲವಾರು ಬಾರಿ ಓಟಿಪಿ ಬಂದಿದ್ದು, ನಂತರ ವಾಸುದೇವ ರವರ ಕಾರ್ಕಳ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ರೂಪಾಯಿ 5, 63, 117/- ಹಣ ಕಡಿತಗೊಂಡಿದ್ದು, ಯಾರೋ ಅಪರಿಚಿತ ವ್ಯಕ್ತಿಗಳು ವಾಸುದೇವ ರವರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವಾಸುದೇವ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 66(D) IT ACT ರಂತೆ ಪ್ರಕರಣ ದಾಖಲಾಗಿದೆ.
