images-2.jpeg
Spread the love

ಕೋಟ: ದಿನಾಂಕ 02-06-2026 (ಹಾಯ್ ಉಡುಪಿ ನ್ಯೂಸ್) ಬನ್ನಾಡಿ ಗ್ರಾಮದ ಉಪ್ಲಾಡಿ ತೆಂಕಬೆಟ್ಟು ಎಂಬಲ್ಲಿ   ಮರಳು ಕಳ್ಳತನ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹಾಂತೇಶ ಜಾಬಗೌಡ ಅವರು ಬಂಧಿಸಿ ಟಿಪ್ಪರ್ ವಶಪಡಿಸಿಕೊಂಡಿದ್ದಾರೆ.

ಕೋಟ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹಾಂತೇಶ್‌ ಜಾಬಗೌಡ ಅವರು ದಿನಾಂಕ:01-06-2026 ರಂದು ಮಧ್ಯಾಹ್ನ ರೌಂಡ್ಸ್‌ ನಲ್ಲಿರುವಾಗ ಬನ್ನಾಡಿ ಗ್ರಾಮದ ಉಪ್ಲಾಡಿ ತೆಂಕಬೆಟ್ಟು ಎಂಬಲ್ಲಿ KA-20-C-8248 ನೇ ಟಿಪ್ಪರ್‌ ನಲ್ಲಿ ಮರಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ದಾಳಿ ಮಾಡಿದಾಗ ಟಿಪ್ಪರ್‌ ಚಾಲಕ ವಾಹನ ಮತ್ತು ಮರಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ,ಓಡಿ ಹೋದ ಟಿಪ್ಪರ್‌ ಮಾಲಕ ಶಶೀಧರ ಪೂಜಾರಿ ಎಂಬುದಾಗಿ ತಿಳಿಯಿತು.

ಟಿಪ್ಪರ್‌ ಚಾಲಕನು ಮರಳನ್ನು ಎಲ್ಲಿಯೋ ಕದ್ದು ಸರಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೇ ಅಕ್ರಮ ಲಾಭಗಳಿಸುವ ಉದ್ದೇಶದಿಂದ ಕಳ್ಳತನ ಮಾಡಿ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಬಗ್ಗೆ ಪರಿಶೀಲನೆ ವೇಳೆ ಕಂಡುಬಂದಿದ್ದು, ಟಿಪ್ಪರ್‌ ನ ಒಳಗಡೆ ಸುಮಾರು 10 ಬುಟ್ಟಿಯಷ್ಟು ಮರಳು ಇದ್ದು, ಕೆಳಗಡೆ ಸುಮಾರು ¾ ಯೂನಿಟ್‌ ನಷ್ಟು ಮರಳು ರಾಶಿ ಇರುವುದು ಕಂಡು ಬಂದಿದ್ದು. ಮರಳಿನ ಮೌಲ್ಯ 6000/-, ಹಾಗೂ ಟಿಪ್ಪರ್‌ ವಾಹನ ಅಂದಾಜು ಮೌಲ್ಯ 2,00,000/- ಹಾಗೂ ಚಾಲಕನು ಬಿಟ್ಟು ಹೋದ ಒಫೋ ಕಂಪೆನಿಯ ಮೋಬೈಲ್‌ ಹ್ಯಾಂಡ್‌ ಸೆಟ್‌ ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 303(2), R/w 4,4(1A) 21 MMRD ACT ರಂತೆ ಪ್ರಕರಣ ದಾಖಲಾಗಿದೆ.

error: No Copying!