Spread the love

ಉಡುಪಿ: ಮೇ ೨೨(ಹಾಯ್ ಉಡುಪಿ ನ್ಯೂಸ್) ನಿರ್ಮಾಣ ಹಂತದಲ್ಲಿರುವ ಖಾಸಗಿ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಚಿಟ್ಪಾಡಿ ,ಬೀಡಿನಗುಡ್ಡೆ ಹಿಂದೂ ರುದ್ರ ಭೂಮಿಯ ಹಿಂಭಾಗದಲ್ಲಿ ಸ್ಥಳೀಯ ನಿವಾಸಿಯೊಬ್ಬರು ಹೊಸ ಮನೆ ಮತ್ತು ಬಾವಿ ನಿರ್ಮಾಣ ಮಾಡುತ್ತಿದ್ದು; ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯ ಕಾರಣ ನಿರ್ಮಾಣ ಕಾರ್ಯ ಸ್ಥಗಿತವಾಗಿತ್ತು ಎನ್ನಲಾಗಿದೆ.

ಇಂದು ಮನೆಯ ಮಾಲೀಕರು ಬಂದು ಬಾವಿ ನೋಡುವಾಗ ಬಾವಿಯಲ್ಲಿ ವ್ಯಕ್ತಿ ಯೋರ್ವರ ಶವ ತೇಲುತ್ತಿರುವುದನ್ನು ಕಂಡು ಪೋಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಶವವನ್ನು ಮೇಲಕ್ಕೆತ್ತಿ ದ್ದಾರೆ ಎನ್ನಲಾಗಿದೆ.

ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿದ್ದು ಯಾರೋ ಸ್ಥಳೀಯ ನಿವಾಸಿಯ ಶವ ಎಂದು ಅಂದಾಜಿಸಲಾಗಿದೆ ಎನ್ನಲಾಗಿದೆ.ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!