ಮಣಿಪಾಲ: ಮೇ ೨೨(ಹಾಯ್ ಉಡುಪಿ ನ್ಯೂಸ್) ಅಂಗಡಿ ಮಾಲಕರೋರ್ವರು ಗಿರಾಕಿ ಮಾಡಿದ ಬಾಕಿ ಹಣ ಕೇಳಿದ್ದಕ್ಕೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಆಂಡ್ರೋ ಎ ಬಾರ್ನಸ್ ಎಂಬವರು ಮಣಿಪಾಲದ ವಿದ್ಯಾರತ್ನ ನಗರದಲ್ಲಿ ಪೆಟ್ ಸ್ಟೋರ್ ನ ಮಾಲೀಕರಾಗಿದ್ದು, ದಿನಾಂಕ: 21.05.2022 ರಂದು ಸಂಜೆ ಸುಮಾರು 4:10 ಗಂಟೆ ಸಮಯಕ್ಕೆ ಆಂಡ್ರೋ ಎ ಬಾರ್ನಸ್ ಅವರು ಪೆಟ್ ಸ್ಟೋರ್ ನಲ್ಲಿ ಕುಳಿತ್ತಿದ್ದಾಗ ರಾಘವೇಂದ್ರ ಎಂಬಾತನು ಏಕಾಏಕಿ ಅಂಗಡಿಯೊಳಗೆ ಬಂದು ಕೈಯಿಂದ ಆಂಡ್ರೋರವರ ಕೆನ್ನೆಗೆ ಹೊಡೆದು ಬಾಕಿ ಇರುವ ಹಣ ಕೇಳಿದರೆ ನಿನ್ನನ್ನುಕೊಲೆ ಮಾಡಿ ಬಿಸಾಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿರುತ್ತಾನೆ ಎನ್ನಲಾಗಿದೆ. ರಾಘವೇಂದ್ರನು ಆಂಡ್ರೋರವರ ಅಂಗಡಿಯಿಂದ ನಾಯಿಯ ಆಹಾರವನ್ನು ಪಡೆದು ಅದರ ಮೊತ್ತವನ್ನು ಬಾಕಿಯಿರಿಸಿದ್ದು, ಈ ಬಗ್ಗೆ ಆಂಡ್ರೋರವರು ಬಾಕಿ ಮೊತ್ತ ನೀಡುವಂತೆ ಕೇಳಿಕೊಂಡಿರುವುದೇ ಘಟನೆಗೆ ಕಾರಣವಾಗಿರುತ್ತದೆ ಎಂದು ದೂರು ನೀಡಲಾಗಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.