ಕುಂದಾಪುರ: ದಿನಾಂಕ : 28/05/2026 (ಹಾಯ್ ಉಡುಪಿ ನ್ಯೂಸ್) ಎಂಕೋಡಿ ಜಂಕ್ಷನ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪುಷ್ಪ ಅವರು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪುಷ್ಪ ಇವರಿಗೆ ದಿನಾಂಕ:27-05-2026 ರಂದು ಎಂ ಕೋಡಿ ಜಂಕ್ಷನ ಬಳಿ ಚೆಕ್ ಪೋಸ್ಟ್ ಕರ್ತವ್ಯದ ಸಿಬ್ಬಂದಿ ಕರೆ ಮಾಡಿ KA-20-D-8849 ಮಿನಿ ಟಿಪ್ಪರ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ತುಂಬಿಸಿಕೊಂಡು ಬಂದಿರುವುದಾಗಿ ಮಾಹಿತಿ ನೀಡಿದಂತೆ ಪಿಎಸ್ಐ ಯವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಹಳದಿ ಬಣ್ಣದ KA-20-D-8849 ಟಾಟಾ ಕಂಪನಿಯ ಮಿನಿ ಟಿಪ್ಪರ್ ವಾಹನವಾಗಿದ್ದು ವಾಹನದ ಹಿಂಬದಿಯಲ್ಲಿ 1 ½ ಯುನಿಟ್ ಮರಳು ಇದ್ದು, ವಾಹನದ ಚಾಲಕ ಆಪಾದಿತ 1. ಶಶಿಧರ ಕುಲಾಲ್ (27),ಜಪ್ತಿ ಗ್ರಾಮ ಕುಂದಾಪುರ ಆಗಿದ್ದು, ಹಳದಿ ಬಣ್ಣದ KA-20-D-8849 ಟಾಟಾ ಕಂಪನಿಯ ಮಿನಿ ಟಿಪ್ಪರ್ ವಾಹನದ ಅಂದಾಜು ಮೌಲ್ಯ 4 ಲಕ್ಷ ಆಗಬಹುದು ಎಂಬುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ .
ಆಪಾದಿತನು ಮಿನಿ ಟಿಪ್ಪರ್ ವಾಹನದ ಮಾಲಕನೊಂದಿಗೆ ಸೇರಿಕೊಂಡು ಮರಳನ್ನು ಎಲ್ಲಿಯೋ ಕಳವು ಮಾಡಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2026 ಕಲಂ:303(2), 112 BNS ಮತ್ತು 4,4(1)(a) 21 MMDR ACT ರಂತೆ ಪ್ರಕರಣ ದಾಖಲಾಗಿರುತ್ತದೆ.
