IMG_20260526_221859.jpg
Spread the love

ಪಡುಬಿದ್ರಿ: ದಿನಾಂಕ:26-05-2026(ಹಾಯ್ ಉಡುಪಿ ನ್ಯೂಸ್) ವ್ಯಕ್ತಿ ಯೋರ್ವರು ನಕಲಿ ಚಿನ್ನಾಭರಣ ವನ್ನು ಬ್ಯಾಂಕ್ ನಲ್ಲಿ ಅಡವಿಟ್ಟು 3.50 ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಪು ತಾಲೂಕು ನಡ್ಸಾಲು ಗ್ರಾಮದ ಪ್ರದೀಪ್‌ ಕುಮಾರ್‌ (31) ಎಂಬವರು ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಪಡುಬಿದ್ರಿ ಶಾಖೆಯ ಶಾಖಾ ಮುಖ್ಯಸ್ಥನಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ.

ಈ ಶಾಖೆಯಲ್ಲಿ ಆಪಾದಿತ ರಾಜೀವ್ ಕಲಾಯತಿನಲ್ಕುಜಿಯಿಲ್ ಕುಟ್ಟಪ್ಪನ್ ಎಂಬಾತನು ದಿನಾಂಕ 21/09/2022 ರಂದು LNAPG ಯೋಜನೆಯ ಅಡಿಯಲ್ಲಿ ಜೆ.ಎಲ್. ಖಾತೆಯಲ್ಲಿ 103.750 ಗ್ರಾಂ ತೂಕದ ಚಿನ್ನ ಆಭರಣಗಳನ್ನು ಅಡವಿಟ್ಟು ರೂಪಾಯಿ 3,49,000/- ಸಾಲ ಪಡೆದಿದ್ದು. ಆರೋಪಿತನ ಮೇಲೆ ಬೇರೆ ಬೇರೆ ಬ್ಯಾಂಕ್‌ ಗಳಲ್ಲಿ ನಕಲಿ ಆಭರಣ ಇಟ್ಟು ಸಾಲ ತೆಗೆದ ಬಗ್ಗೆ ದಾಖಲಾದ ಪ್ರಕರಣದ ಹಿನ್ನಲೆಯಲ್ಲಿ ಸಂಶಯಗೊಂಡು ಆಪಾದಿತ ರಾಜೀವ್ ಕುಟ್ಟಪ್ಪ ನ್ ನು ಪ್ರದೀಪ್ ಕುಮಾರ್ ರ ಬ್ಯಾಂಕ್‌ ನಲ್ಲಿ ಸಾಲಪಡೆಯುವ ಸಮಯ ಒತ್ತೆ ಇಟ್ಟ ಚಿನ್ನದ ಆಭರಣಗಳ ಮರು ಪರಿಶೀಲನೆಯನ್ನು ಮೆಜರ್ಸ್ ಸುಮೇರು ಗ್ಲೋಬಲ್ ಸಪೋರ್ಟ್ ಸೊಲುಷನ್ ಪ್ರೈವೇಟ್ ಲಿಮಿಟೆಡ್‌ನ ಆಭರಣದ ಎಂಪನೇಲ್ಡ್ ಪರೀಕ್ಷಕರವರು ದಿನಾಂಕ 03/12/2025 ರಂದು ಪರಿಶೀಲನೆ ನಡೆಸಿ ನೀಡಿದ ವರದಿಯಲ್ಲಿ ಚಿನ್ನದ ಆಭರಣಗಳು ನಕಲಿ ಎಂದು ಕಂಡು ಬಂದಿರುತ್ತದೆ. ಆಪಾದಿತ ರಾಜೀವ್ ಕಲಾಯತಿನಲ್ಕುಜಿಯಿಲ್ ಕುಟ್ಟಪ್ಪನ್ ಒಟ್ಟು 103.750 ಗ್ರಾಂ ತೂಕದ ನಕಲಿ ಬಂಗಾರದ ಒಡವೆಗಳು ಎಂದು ತಿಳಿದಿದ್ದರೂ ಕೂಡಾ ಅಸಲಿ ಎಂದು ಸಾರ್ವಜನಿಕರು ಇಟ್ಟ ಠೇವಣಿಯಿಂದ ನಡೆಸಲ್ಪಡುವ ಬ್ಯಾಂಕಿಗೆ ನಂಬಿಸಿ ಅಡವಿಟ್ಟು ರೂಪಾಯಿ 3,49,000/–ವನ್ನು ಸಾಲವಾಗಿ ಪಡೆದು ಬ್ಯಾಂಕಿಗೆ ಮೋಸ ಮಾಡಿರುವುದಾಗಿದೆ. ಆಪಾದಿತ ರಾಜೀವ್ ಕುಟ್ಟಪ್ಪನ್ ನು ಇಲ್ಲದೇ ಆತನು ಅಡವಿಟ್ಟ ಚಿನ್ನವನ್ನು ಮರು ಪರಿಶೀಲಿಸಲು ಬ್ಯಾಂಕ್‌ನಲ್ಲಿ ಅವಕಾಶವಿಲ್ಲದೇ ಇದ್ದು ನಂತರ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್‌ ನ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಚಿನ್ನ ಆಭರಣಗಳ ಮರು ಮೌಲ್ಯಮಾಪನ ನಡೆಸಿ ವರದಿ ಪಡೆದು ದೂರು ದಾಖಲಿಸಲು ಅನುಮತಿ ಪಡೆದು ಬಂದು ದೂರು ನೀಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2026 ಕಲಂ: 406, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!