ಮಣಿಪಾಲ: ದಿನಾಂಕ : 26-05-2026 (ಹಾಯ್ ಉಡುಪಿ ನ್ಯೂಸ್) ಟ್ರೇಡಿಂಗ್ ವ್ಯವಹಾರದಲ್ಲಿ ಅಧಿಕ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿ ಯೋರ್ವರಿಗೆ 3.50 ಲಕ್ಷ ರೂಪಾಯಿ ವಂಚನೆ ನಡೆದಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಮಂಗಳೂರು ಕುಲಶೇಖರ ನಿವಾಸಿ ಗಣೇಶ ಪಿ ಎಲ್ (45) ಎಂಬವರು ಮಣಿಪಾಲದ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಒಂದು ವರ್ಷದ ಹಿಂದೆ ಗಣೇಶ್ ರವರ ಪರಿಚಯದ ಹರೀಶ್ ಎಂಬವರ ಮೂಲಕ ಆರೋಪಿ ಅರವಿಂದ ನಾಯಕ್ ಎಂಬವರ ಪರಿಚಯವಾಗಿದ್ದು, ದಿನಾಂಕ 20/03/2025 ರಂದು ಆರೋಪಿತ ಅರವಿಂದ ನಾಯಕ್ ರವರು ಅಲೆವೂರಿನಲ್ಲಿರುವ ಅಕ್ಷಯ್ ಎಂಟರ್ ಪ್ರೈಸಸ್ ಎಂಬ ಕಛೇರಿಯಲ್ಲಿ Mine Crypto ಎಂಬ ಹೆಸರಿನ Forex ಟ್ರೇಡಿಂಗ್ ವ್ಯವಹಾರದ ಬಗ್ಗೆ ಮಾತುಕತೆ ನಡೆದು, ಹೂಡಿಕೆ ಮಾಡಿದ ಮೊತ್ತದ ಮೇಲೆ 7% ಲಾಭ ನೀಡುವುದಾಗಿ ಭರವಸೆ ನೀಡಿ, ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದು, ಅದರಂತೆ ಗಣೇಶ್ ರವರು ದಿನಾಂಕ 21/03/2025 ರಿಂದ 27/03/2025 ರವರೆಗೆ ದಿನಕ್ಕೆ 50,000/- ರಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಣಂಬೂರು ಶಾಖೆ, ಮಂಗಳೂರು ಇಲ್ಲಿನ ಖಾತೆ ಯಲ್ಲಿ ಆರೋಪಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಗೆ 3,50,000/- ರೂ ಹಣವನ್ನು ವರ್ಗಾಯಿಸಿದ್ದು, ಬಳಿಕ ಗಣೇಶ್ ರವರು ಹೂಡಿಕೆ ವಿಚಾರವಾಗಿ ಕೇಳಿದಾಗ ತಾಂತ್ರಿಕ ಸಮಸ್ಯೆಗಳ ಕುರಿತು ತಿಳಿಸಿರುತ್ತಾರೆ. ಅರವಿಂದ ನಾಯಕ್ ನು ಗಣೇಶ್ ರಿಗೆ ಹೂಡಿಕೆ ಮಾಡಿ 7% ಲಾಭ ನೀಡುವುದಾಗಿ ನಂಬಿಸಿ 3,50,000/- ರೂ ಹಣವನ್ನು ವರ್ಗಾವಣೆ ಮಾಡಿಕೊಂಡು ಹೂಡಿಕೆಯ ಹಣವನ್ನು ಹಾಗೂ ಲಾಭವನ್ನು ನೀಡದೇ, ನಂಬಿಸಿ ಮೋಸ ಮಾಡಿದ್ದಾನೆ ಎಂದು ಗಣೇಶ್ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಗಣೇಶ್ ಪಿ ಎಲ್ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 318, 316, 61(2), 340(2), 3(5) BNS ರಂತೆ ಪ್ರಕರಣ ದಾಖಲಾಗಿದೆ.
