4136afe2da2a2aaeae5994b4adfbc9f6eff2fa8d6b4062144507c42bc2707f56.jpg
Spread the love

ಭಟ್ಕಳ: ದಿನಾಂಕ:26-05-2026(ಹಾಯ್ ಉಡುಪಿ ನ್ಯೂಸ್) ಕೆಲವು ಸಮಯದಿಂದ ತಣ್ಣಗಿದ್ದ ಕರಾವಳಿಯ ಭಟ್ಕಳದಲ್ಲಿ ಮತ್ತೆ ಅನಾಹುತಕಾರಿ ಚಟುವಟಿಕೆಗಳು ಪ್ರಾರಂಭವಾಗುತ್ತಿದೆ. ನಿನ್ನೆ ರಾತ್ರಿ, ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಧಾರ್ಮಿಕ ಚಟುವಟಿಕೆಯ ಕಟ್ಟೆಯೊಂದನ್ನು ಧ್ವಂಸ ಮಾಡುವ ಮೂಲಕ ಇಂತಹದೊಂದು ಹಿಂಸಾತ್ಮಕ ಚಟುವಟಿಕೆಗೆ ಆಹ್ವಾನ ನೀಡಿದ್ದಾರೆ ಇಲ್ಲಿನ ಕಮ್ಯುನಲ್ ಕ್ರಿಮಿಗಳು. 

ಭಟ್ಕಳ ನಗರದ ವೆಂಕಟಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ, ಹಲವು ವರುಷಗಳಿಂದ ಇದ್ದಂತಹ ಮೂರಿನಕಟ್ಟೆ (ದೇವರ ಹೊರೆ ಇಳಿಸುತ್ತಿದ್ದ ಸ್ಥಳ) ಯನ್ನು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಕಾರಣದಿಂದಾಗಿ ತೆರವುಗೊಳಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಂತರ, ಮೂರಿನಕಟ್ಟೆಯನ್ನು  ಪುನಃ ನಿರ್ಮಾಣ ಮಾಡುವಂತೆ ಸತತ ಬೇಡಿಕೆಯನ್ನು ಇಡುತ್ತಾ ಬಂದಿದ್ದರು ಅಧಿಕಾರಿಗಳು ಕಿವಿಗೊಟ್ಟಿರಲಿಲ್ಲ.

ಹೀಗಾಗಿ, ನಿನ್ನೆ ಸ್ಥಳೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ಸ್ವತಹ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಮೂರಿನಕಟ್ಟೆಯನ್ನು ನಿರ್ಮಿಸಿದ್ದರು. ಈ ಸಂದರ್ಭದಲ್ಲಿ ಅನ್ಯ ಕೋಮಿನ ವ್ಯಕ್ತಿಗಳು ಇದಕ್ಕೆ ಅಪಸ್ವರ ವ್ಯಕ್ತ ಪಡಿಸಿದ್ದರು. ಪೊಲೀಸರು ಕೂಡ ಜಮಾವಣೆಯಾಗಿದ್ದರು. ಕೊನೆಗೆ ಅದು ಸರ್ಕಾರಿ ಜಾಗದಲ್ಲಿದೆ ಅದರಿಂದ ಯಾವುದೇ ತೊಂದರೆ ಇಲ್ಲ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಅನ್ಯ ಕೋಮಿನ ವ್ಯಕ್ತಿಗಳು ಅಲ್ಲಿಂದ ತೆರಳಿದ್ದರು.

ಆದರೆ ತಡರಾತ್ರಿ ಇಲ್ಲಿನ ಕ್ರಿಮಿನಲ್ ಹಿನ್ನೆಲೆಯ ಹಾಗೂ ಅಪ್ಪಟ ಕಮ್ಯೂನಲ್ ಯುವಕರ ತಂಡವು ಈ ಒಂದು ಪ್ರದೇಶದ ಮೇಲೆ ದಾಳಿಮಾಡಿ ನಿರ್ಮಿಸಲಾಗಿದ್ದ ಮೂರಿನ ಕಟ್ಟೆಯನ್ನು ದ್ವಂಸ ಗೊಳಿಸಿದೇ ಎಂಬ ಆರೋಪ ಕೇಳಿ ಬಂದಿದೆ.

ಉದ್ವಿಗ್ನ ಪರಿಸ್ಥಿತಿಯ ಕಾರಣ ಸ್ಥಳಕ್ಕೆ ಬಂದ ಪೊಲೀಸರ ಎದುರೇ, ಈ ಕಮ್ಯುನಲ್ ಕ್ರಿಮಿಗಳು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಿರ್ಮಿಸಿದ ಧಾರ್ಮಿಕ ಹಿನ್ನೆಲೆಯ ಕಟ್ಟೆಯನ್ನು ಧ್ವಂಸ ಗೊಳಿಸಿದ್ದಾರೆ, ಆ ಮೂಲಕ ಮತ್ತೊಮ್ಮೆ ಕಮ್ಯೂನಲ್ ಗಲಾಟೆಗೆ ಇನ್ನೊಂದು ಸಮುದಾಯವನ್ನು ಪ್ರವೋಕ್ ಮಾಡಿದ್ದಾರೆ.

ಭಟ್ಕಳದ ಶಾಂತಿಗೆ ಭಂಗ ತರುವ ಕೆಲಸವನ್ನು ಮಾಡಿದ ಆ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕೆಲಸ ಆಗದಿದ್ದರೆ, ಹಾಗೆಯೇ ದ್ವಂಸ ಗೊಂಡ ಕಟ್ಟೆಯನ್ನು ಪುನರ್ ನಿರ್ಮಾಣ ಮಾಡದಿದ್ದರೆ ಇದೇ ವಿಚಾರ ಭಟ್ಕಳವನ್ನು ಮಾತ್ರವಲ್ಲ ಇಡೀ ಕರಾವಳಿಯನ್ನು ಕೋಮು ಜ್ವಾಲೆಯ ಕುಂಡದೊಳಗೆ ಹಾಕಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ, ಅನಾದಿ ಕಾಲದಿಂದ ಇದ್ದಂತಹ ಈ ಧಾರ್ಮಿಕ ಕಟ್ಟೆ, ಯಾರಿಗೂ ತೊಂದರೆ ಕೊಟ್ಟಿರಲಿಲ್ಲ. ಸರ್ಕಾರಿ ಜಾಗದಲ್ಲಿರುವ ಕಾರಣ ಯಾವ ಧರ್ಮದವರಿಗೂ ಅದರಿಂದ ತೊಂದರೆ ಇರಲಿಲ್ಲ. ಆದರೂ ಇನ್ನೊಂದು ಧರ್ಮದವರು ಇದರ ವಿರುದ್ಧ ದಾಂದಲೆ ನಡೆಸಿರುವಂಥದ್ದು, ಅಕ್ಷಮ್ಯ ಎಂಬ ಮಾತು ಕೇಳಿ ಬರುತ್ತಿದೆ. ಈಗಲೇ ಅವರನ್ನು ಹೆಡೆಮುರಿ ಕಟ್ಟದಿದ್ದರೆ ಇದರ ತಾಪವು ಎಲ್ಲೆಡೆ ಪಸರಿಸುವ ಸಾಧ್ಯತೆ ಇರುವುದರ ಬಗ್ಗೆ ಗುಸುಗುಸು ಶುರುವಾಗಿದೆ. ಹಾಗೆಯೇ ಇದೇ ವಿಚಾರವಾಗಿ ಎಲ್ಲೆಡೆ ಪ್ರತಿಭಟನಾ ಸಭೆ ಹಾಗೂ ಭಟ್ಕಳ ಚಲೋ ಕರೆ ಕೊಟ್ಟರು ಅಚ್ಚರಿಯಿಲ್ಲ, ಹಾಗಾಗಿ ಈ ವಿಚಾರದಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಎಷ್ಟು ಕಠಿಣ ಕ್ರಮ ಕೈಗೊಳ್ಳುತ್ತಾರೆ ಅನ್ನೋದರ ಮೇಲೆ ಎಲ್ಲವೂ ನಿಂತಿದೆ. ಉಸ್ತುವಾರಿ ಸಚಿವ ಮಂಗಳ ವೈದ್ಯ ಸ್ಥಳೀಯರಾದ ಕಾರಣ ಅವರು ಇದನ್ನು ಹೇಗೆ ಮ್ಯಾನೇಜ್ ಮಾಡಬಹುದು ಅನ್ನುವುದರ ಬಗ್ಗೆಯೂ ಜನರಲ್ಲಿ ಕುತೂಹಲವಿದೆ.

error: No Copying!