ಶಿರ್ವ: ದಿನಾಂಕ:21-05-2026(ಹಾಯ್ ಉಡುಪಿ ನ್ಯೂಸ್) ಯುವತಿ ಯೋರ್ವಳು ಯಾವುದೋ ಕಾರಣಕ್ಕೆ ಮನನೊಂದು ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪಡುಬೆಳ್ಳೆ ನಿವಾಸಿ ರಾಘವೇಂದ್ರ (38) ಎಂಬವರ ಚಿಕ್ಕಮ್ಮನ ಮಗಳಾದ ನಯನ (32)ರವರಿಗೆ ಕಾರ್ಕಳ ಬೈಲೂರು ನಿವಾಸಿ ಪ್ರಶಾಂತ ಎಂಬವರೊಂದಿಗೆ ಹಿರಿಯರ ಸಮ್ಮುಖ ದಿನಾಂಕ:20/5/2022 ರಂದು ಮದುವೆಯಾಗಿದ್ದು, ಪ್ರಸ್ತುತ 6 ತಿಂಗಳ ಹೆಣ್ಣು ಮಗುವಿರುತ್ತದೆ.ನಯನಳ ಗಂಡ ಪ್ರಶಾಂತ್ ರವರು ಲಿಫ್ಟ್ ಮೆಕ್ಯಾನಿಕ್ ಆಗಿ ಬೆಂಗಳೂರಿನಲ್ಲಿದ್ದು ಊರಿಗೆ ಬಂದು ಹೋಗುತ್ತಿರುತ್ತಾರೆ. ನಯನಳು ಮದುವೆಯಾಗಿ ಬೆಂಗಳೂರಿನಲ್ಲಿದ್ದು ನಂತರ ಹೆರಿಗೆಗೆ ನಮ್ಮ ಮನೆಗೆ ಬಂದು ಇಲ್ಲಿಯೇ ವಾಸವಿರುತ್ತಾರೆ.
ನಯನಳು ಮದುವೆಯಾಗಿ ಸುಮಾರು 2 ವರ್ಷದ ಹಿಂದೆ ಗರ್ಭವತಿಯಾಗಿ ಗರ್ಭಪಾತದ ಕುರಿತು ವಿಪರೀತ ಟೆನ್ ಶನ್ ಮಾಡುತ್ತಿದ್ದಳು. ಈ ಬಗ್ಗೆ ಉಡುಪಿ ಬಾಳಿಗಾ ಆಸ್ಪತ್ರೆ ಮತ್ತು ಉದ್ಯಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ದಿನಾಂಕ:15/05/2026 ರಂದು ನಯನಳ ಗಂಡ ಪ್ರಶಾಂತ್ ನು ರಾಘವೇಂದ್ರ ರ ಅಣ್ಣ ಸಂತೋಷ್ ರವರಿಗೆ ಕರೆ ಮಾಡಿ ನಯನಳು ಸಾಯುವುದಾಗಿ ಫೋನ್ ನಲ್ಲಿ ಹೇಳಿದ ವಿಚಾರವನ್ನು ತನಗೆ ತಿಳಿಸಿದಂತೆ ನಯನಳ ರೂಮ್ ಗೆ ಹೋದಾಗ ಅವಳ ಅಮ್ಮ ಕೂಡಾ ಇದ್ದು, ವಿಚಾರಿಸಿದಾಗ ಪ್ರಾರಂಭದಲ್ಲಿ ಸರಿಯಾಗಿ ಪ್ರತಿಕ್ರಿಯಿಸದೇ ನಂತರ ವಿಚಾರಿಸಿದಾಗ ಇಲಿ ಪಾಶಣವನ್ನು ತೆಗೆದುಕೊಂಡಿರುವುದಾಗಿ ತಿಳಿಸಿದಳು. ನಂತರ ಆಕೆಯನ್ನು ಕೂಡಲೇ ಮಣಿಪಾಲ ಕೆಎಮ್ ಸಿ ಆಸ್ಪತ್ರೆಗೆ ದಾಖಲಿಸಿದ್ದು, ಈ ದಿನ ದಿನಾಂಕ:21/05/2026 ರಂದು ಬೆಳಿಗ್ಗೆ 01.30 ಗಂಟೆಗೆ ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟಿರುತ್ತಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಕಲಂ: 194 BNSS ರಂತೆ ಪ್ರಕರಣ ದಾಖಲಾಗಿದೆ.
