ಬ್ರಹ್ಮಾವರ: ದಿನಾಂಕ : 21/05/2026 (ಹಾಯ್ ಉಡುಪಿ ನ್ಯೂಸ್) ಕೆಂಜೂರು ಗ್ರಾಮದ ಪಾದೆಮಠ ಎಂಬಲ್ಲಿ ನ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮುಕ್ತಾ ಬಾಯಿ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮುಕ್ತಾ ಬಾಯಿ ಅವರು ದಿನಾಂಕ:20-05-2026 ರಂದು ಪೇತ್ರಿ ಕಡೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೆಂಜೂರು ಗ್ರಾಮದ ಪಾದೆಮಠ ಎಂಬಲ್ಲಿ ವೀರಭದ್ರ ದೇವಸ್ಥಾನದ ಬಳಿ ಸರಕಾರಿ ಜಾಗದಲ್ಲಿ ಕೆಲವು ಜನರು ಸೇರಿಕೊಂಡು ಕೋಳಿಗಳನ್ನು ಹಿಂಸಾತ್ಮಕವಾಗಿ ಅವುಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಮನೋರಂಜನೆಗಾಗಿ ಹಾಗೂ ಹಣವನ್ನು ಪಣವಾಗಿ ಕಟ್ಟಿ ಜೂಜಾಟಕ್ಕಾಗಿ ಕೋಳಿ ಅಂಕವನ್ನು ಆಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಅಲ್ಲಿಗೆ ದಾಳಿ ನಡೆಸಿದಾಗ ಜನರು ಓಡಲು ಚದರಿದ್ದು. ಆಗ ಸಿಬ್ಬಂದಿಯವರು ಸುತ್ತುವರಿದು ಅದರಲ್ಲಿದ್ದ 1] ಸಂತೋಷ್ ಶೆಟ್ಟಿ, 2] ರಜತ್ ಪೂಜಾರಿ, 3] ಸುಕೇಶ್ ಶೆಟ್ಟಿ, 4] ದಿನೇಶ್ ಶೆಟ್ಟಿ ಇವರನ್ನು ಹಿಡಿದಿದ್ದು ಉಳಿದವರು ಓಡಿ ಹೋಗಿರುತ್ತಾರೆ.
ಬಂಧಿಸಲ್ಪಟ್ಟ 4 ಜನ ಆರೋಪಿತರು ಕೋಳಿ ಅಂಕಕ್ಕೆ ಜುಗಾರಿಗಾಗಿ ಉಪಯೋಗಿಸಿದ ಒಟ್ಟು ರೂಪಾಯಿ 2,120/- ರೂಪಾಯಿ ಹಣವನ್ನು ಹಾಗೂ ಸ್ಥಳದಲ್ಲಿ ಕಾದಾಡುತ್ತಿದ್ದ 2 ಕೋಳಿಗಳು ಹಾಗೂ ಕೋಳಿಗಳ ಕಾಲಿನಲ್ಲಿದ್ದ ಕತ್ತಿ (ಬಾಳ್) ಮತ್ತು ಬಾಳ್ ಕಟ್ಟಲು ಉಪಯೋಗಿಸಿದ ಹಗ್ಗದ ತುಂಡು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 87, 93 KP ACT AND US 11 PREVENTION OF CRUELTY OF ANIMAL ACT ರಂತೆ ಪ್ರಕರಣ ದಾಖಲಾಗಿದೆ.
