images-13.jpeg
Spread the love

ಗಂಗೊಳ್ಳಿ: ದಿನಾಂಕ:17-05-2026(ಹಾಯ್ ಉಡುಪಿ ನ್ಯೂಸ್) ವ್ಯವಹಾರದ ವಿಷಯದಲ್ಲಿ ವ್ಯಕ್ತಿ ಯೋರ್ವರನ್ನು ಕೊಲೆ ಮಾಡುವ ಉದ್ದೇಶದಿಂದ ಮೂವರು ಯುವಕರ ತಂಡವೊಂದು ರಾಡ್ ನಿಂದ ಹೊಡೆದು ಹೋದ ಘಟನೆ ತ್ರಾಸಿ ಯಲ್ಲಿ ನಡೆದಿದೆ.

ಕುಂದಾಪುರ ,ಹಂಗಳುರು ಗ್ರಾಮದ ಯುನಿಟಿ ಹಾಲ್ ಹತ್ತಿರದ ನಿವಾಸಿ ನಾಗರಾಜ ಜೋಗಿ (27) ಎಂಬವರು ದಿನಾಂಕ 16/05/2026 ರಂದು ಬೆಳಿಗ್ಗೆ  ವ್ಯವಹಾರದ ನಿಮಿತ್ತ ತ್ರಾಸಿ ಗ್ರಾಮದ ಆನುಗೋಡಿನಲ್ಲಿ ಅವರ ಬೈಕಿನಲ್ಲಿ ರಸ್ತೆಯ ಬದಿಯಲ್ಲಿ ಇದ್ದಾಗ ವ್ಯವಹಾರದ ವಿಚಾರವಾಗಿ ಆಪಾದಿತರಾದ ಪ್ರದೀಪ್‌ ಹೆಮ್ಮಾಡಿ, ಆದಿತ್ಯ ಶೆಟ್ಟಿ, ಶ್ರೀಕಾಂತ ಮೊಗವೀರ ರವರು ನಾಗರಾಜ ಜೋಗಿ ರವರ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ನಿನ್ನದು ಜಾಸ್ತಿಯಾಯಿತು ಎಂಬುದಾಗಿ ಹೇಳಿ ಬೈಕಿನಿಂದ ಕೆಳಗಿಳಿಸಿ ಆಪಾದಿತ ಪ್ರದೀಪನು ರಾಡ್‌ ನಿಂದ ಕೊಲೆ ಮಾಡುವ ಉದ್ದೇಶದಿಂದ ನಾಗರಾಜ ಜೋಗಿ ರವರ ತಲೆಗೆ ಹೊಡೆಯಲು ಬಂದಾಗ ನಾಗರಾಜ ರವರು ತಪ್ಪಿಸಿಕೊಂಡಾಗ ರಾಡ್‌ ನ ಏಟು ನಾಗರಾಜರ ಗಲ್ಲಕ್ಕೆ ತಾಗಿ ರಕ್ತ ಗಾಯವಾಗಿದ್ದು ಉಳಿದ ಆಪಾದಿತರು ಕಾಲಿನಿಂದ ತುಳಿದು, ಕೈಯಿಂದ ಹೊಡೆದು ಇವತ್ತು ನೀನು ಬದುಕಿದ್ದೀಯಾ, ಮುಂದಕ್ಕೆ ನಿನ್ನನ್ನು ಜೀವ ಸಹೀತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ನಾಗರಾಜ ಜೋಗಿ ರವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ  ಕಲಂ: 352,109, 115(2), 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!