IMG-20260516-WA0044.jpg
Spread the love


ಕೊಲ್ಲೂರು: ದಿನಾಂಕ:16-05-2026(ಹಾಯ್ ಉಡುಪಿ ನ್ಯೂಸ್) ಹಲ್ಕಲ್ ಎಂಬಲ್ಲಿ ದಿನಾಂಕ:13ರಂದು ಎಸ್ಎಮ್ ಎಮ್ ಎಸ್ಸ್ ಹೆಸರಿನ ಬಸ್ ಚಾಲಕನಿಗೆ ಕೊಲ್ಲೂರಿನ ಹಲ್ಕಲ್ ಬಳಿ ಎರಡು ರಿಕ್ಷಾ ಗಳಲ್ಲಿ ಬಂದ ಐವರು ವ್ಯಕ್ತಿ ಗಳು ಬಸ್ ಗೆ ರಿಕ್ಷಾ ಅಡ್ಡ ಇಟ್ಟು ಬಸ್ ನಿಲ್ಲಿಸಿ ಚಾಲಕ ಮಂದಾರ ಎಂಬವರಿಗೆ ಐದೂ ಜನರು ಆರೋಪಿಗಳು ಸೇರಿ ಗಂಭೀರ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಬಸ್ ಚಾಲಕನನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿ ರಿಕ್ಷಾ ಚಾಲಕರನ್ನು ರಕ್ಷಿಸಲು ರಾಜಕೀಯ ಪಕ್ಷವೊಂದರ ಪ್ರಮುಖರು ಪೊಲೀಸರಿಗೆ ಒತ್ತಡ ಹೇರಿದ್ದಾರೆ ಎನ್ನಲಾಗಿದ್ದು,ಈ ಮೂಲಕ ದೂರು ದಾರರು ನೀಡಿದ್ದ ದೂರನ್ನೇ ದೂರು ದಾಖಲಿಸಲು ಆಸ್ಪತ್ರೆಗೆ ಬಂದಿದ್ದ ಪೊಲೀಸ್ ಸಿಬ್ಬಂದಿ ತಿರುಚಿ ಬರೆದು ಆರೋಪಿಗಳ ಪರವಾಗಿ ನಿಂತಿದ್ದಾರೆ ಎಂದು ದೂರು ದಾರರು ಆರೋಪಿಸಿದ್ದಾರೆ. ಅಲ್ಲದೆ ಐದು ಜನ ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಇಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ ಟ್ರೇಡ್ ಯೂನಿಯನ್ ( ರಿ )ಉಡುಪಿ ಜಿಲ್ಲೆ ಇವರ ವತಿಯಿಂದ ಸಂಘಟನೆಯ ಸದಸ್ಯರು ಕೊಲ್ಲೂರು ಪೊಲೀಸ್ ಠಾಣಾಧಿಕಾರಿ ಯವರಿಗೆ ದೂರು ಸಲ್ಲಿಸಿ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಹಾಗೂ ತಿರುಚಿ ಬರೆದು ಕೊಂಡಿರುವ ದೂರನ್ನು ಸರಿಪಡಿಸಬೇಕು ಹಾಗೂ ಆರೋಪಿಗಳ ಪರವಾಗಿ ನಿಂತಿರುವ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಪಡಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ನ್ಯಾಯ ದೊರಕದಿದ್ದರೆ ರಾಜ್ಯ ಮಟ್ಟದಲ್ಲಿ ಪ್ರತಿಭಟಿಸಲಾಗುವುದು ಎಂದಿದ್ದಾರೆ.

ಈ ಸಂದರ್ಭದಲ್ಲಿ ರಮೇಶ್ ಕುಂದಾಪುರ, K T D O ರಾಜ್ಯಾಧ್ಯಕ್ಷರು, ಅಂಬರೀಶ್ ಉಡುಪಿ ಜಿಲ್ಲಾಧ್ಯಕ್ಷರು, ರಾಜು ಬೈಂದೂರು ಜಿಲ್ಲಾ ಕಾರ್ಯದರ್ಶಿ, ಹಾಗೂ ಜಿಲ್ಲೆಯ ಹಲವು ಸದಸ್ಯರು  ಹಾಜರಿದ್ದರು.

error: No Copying!