ಕಾರ್ಕಳ: ದಿನಾಂಕ:16-05-2026(ಹಾಯ್ ಉಡುಪಿ ನ್ಯೂಸ್) ಜೋಡು ರಸ್ತೆ ಯಲ್ಲಿ ಟೈರ್ ಅಂಗಡಿ ನಡೆಸಿಕೊಂಡಿರುವ ವ್ಯಕ್ತಿ ಯೋರ್ವರಿಗೆ ಹಣಕಾಸು ವಂಚನೆ ನಡೆಸಿದ್ದ ಅಂಗಡಿಯ ನೌಕರನೋರ್ವ ಅಂಗಡಿ ಸುಟ್ಟು ಹಾಕುವುದಾಗಿ ಬೆದರಿಸಿದ್ದ ಲ್ಲದೆ, ಜೀವಬೆದರಿಕೆ ಹಾಕಿದ್ದಾರೆ ಎಂದು ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಗುರುವಾಯನಕೆರೆ ಕುವೆಟ್ಟು ಗ್ರಾಮದ ನಿವಾಸಿ ಅಪ್ಸರ್ ಪಿ.ಕೆ ಕಲ್ಲುಮನೆ ಎಂಬವರು ಜೋಡುರಸ್ತೆಯಲ್ಲಿ ಟೈರ್ ಮಾರ್ಟ್ ಎಂಬ ಹೆಸರಿನ ಟಯರ್ ಅಂಗಡಿಯನ್ನು ನಡೆಸಿಕೊಂಡಿದ್ದು ಈ ಅಂಗಡಿಯಲ್ಲಿ ಆಪಾದಿತ ಮಹಮದ್ ಸಿನಾನ್ ಎಂಬವನು ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ.
ಆಪಾದಿತ ಮಹಮದ್ ಸಿನಾನ್ ಈತನು ಅಂಗಡಿ ವ್ಯವಹಾರದ ಹಣವನ್ನು ದುರುಪಯೋಗ ಮಾಡಿಕೊಂಡ ಬಗ್ಗೆ ಆತನಲ್ಲಿ ವಿಚಾರಸಿದಾಗ ಆತನು ಉಡಾಫೆಯಾಗಿ ಹಣವನ್ನು ತೆಗೆದಿಲ್ಲ ಎಂದು ಹೇಳಿರುತ್ತಾನೆ.
ದಿನಾಂಕ:07.05.2026 ರಂದು ಆಪಾದಿತ ಮಹಮದ್ ಸಿನಾನ್ ನ ತಮ್ಮ ಸಾಹಿಲ್ ಎಂಬವನು ಆತನ ಮೊಬೈಲ್ ನಂಬ್ರದಿಂದ ಅಪ್ಸರ್ ಪಿ.ಕೆ ರವರ ಅಂಗಡಿಯಲ್ಲಿ ಕೆಲಸ ಮಾಡುವ ರಿಫಾದ್ ಎಂಬವನ ಮೊಬೈಲ್ ಪೋನ್ ಗೆ ಕರೆಮಾಡಿ ಅಪ್ಸರ್ ಪಿ.ಕೆ ರವರಿಗೆ ಹಾಗೂ ಅವರ ತಾಯಿಯವರಿಗೆ “ನಿನ್ನನ್ನು ನೋಡಿಕೊಳ್ಳುತ್ತೇನೆ “ ಎಂದು ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಅಂಗಡಿಯನ್ನು ಬೆಂಕಿ ಹಾಕಿ ಸುಟ್ಟುಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದು, ದಿನಾಂಕ:07.05.2026 ರಂದು ಸಂಜೆ ಕಾರ್ಕಳ ಪೊಲೀಸ್ ಠಾಣೆಯ ಹೊರಗಡೆ ರಸ್ತೆಯಲ್ಲಿ ಇಕ್ಬಾಲ್ ಎಂಬವರ ಜೊತೆ ನಿಂತುಕೊಂಡಿದ್ದಾಗ ಆಪಾದಿತ ಮಹಮದ್ ಸಿನಾನ್ ಜೊತೆ ಬಂದಿದ್ದ ಅಕೀಬ್ ಎಂಬವನು ಅಪ್ಸರ್ ಪಿ.ಕೆ ರನ್ನು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 126(2),352, 351(3) ಜೊತೆಗೆ 3(5)BNS 2023 ರಂತೆ ಪ್ರಕರಣ ದಾಖಲಾಗಿದೆ.
