ಬೈಂದೂರು: ದಿನಾಂಕ: 15-05-2026(ಹಾಯ್ ಉಡುಪಿ ನ್ಯೂಸ್)ಉಪ್ಪುಂದ ಗ್ರಾಮದ ಪೂರ್ಣಿಮಾ ಬಾರ್ ಮತ್ತು ರೆಸ್ಟೋರೆಂಟ್ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಐದು ಜನರನ್ನು ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ಸುನೀಲ ಕುಮಾರ್ ಬಿ ವೈ ಅವರು ಬಂಧಿಸಿದ್ದಾರೆ.
ಬೈಂದೂರು ಠಾಣೆಯ ಪಿಎಸ್ಐ ಸುನೀಲ ಕುಮಾರ್ ಬಿ ವೈ ಅವರಿಗೆ ದಿನಾಂಕ: 14-05-2026 ರಂದು ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಪೂರ್ಣಿಮಾ ಬಾರ್ ಮತ್ತು ರೆಸ್ಟೂರೆಂಟ್ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಹರ್ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಕೂಡಲೇ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಆಪಾದಿತ 1] ವಿಶ್ವನಾಥ ದೇವಾಡಿಗ (35) ಬಿಜೂರು ಗ್ರಾಮ ಬೈಂದೂರು ತಾಲೂಕು 2] ಅಣ್ಣಪ್ಪ ಖಾರ್ವಿ (56) ಉಪ್ಪುಂದ ಗ್ರಾಮ ಬೈಂದೂರು ತಾಲೂಕು 3] ಸುಬ್ರಹ್ಮಣ್ಯ ಖಾರ್ವಿ ಉಪ್ಪುಂದ ಗ್ರಾಮ ಬೈಂದೂರು ತಾಲೂಕು 4) ಕೃಷ್ಣ ಖಾರ್ವಿ (38) ಉಪ್ಪುಂದ ಗ್ರಾಮ ಬೈಂದೂರು ತಾಲೂಕು 5] ಸುಬ್ರಹ್ಮಣ್ಯ ಖಾರ್ವಿ (38) ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಅವರಿಂದ ಇಸ್ಪೀಟ್ ಆಟಕ್ಕೆ ಬಳಸಿದ ಒಟ್ಟು ನಗದು ರೂಪಾಯಿ 2,650/- ಮತ್ತು 52 -ಇಸ್ಪೀಟ್ ಎಲೆಗಳು, ಒಂದು ಹರಿದ ಹಳದಿ ಬಣ್ಣದ ಸಿಮೆಂಟ್ ಚೀಲ ವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ:87 KP Act ರಂತೆ ಪ್ರಕರಣ ದಾಖಲಾಗಿದೆ.
