IMG_20260512_074406.jpg
Spread the love

ನೆನಪಿಸುತ್ತಿದೆ ನನ್ನ ಕಣ್ಣುಗಳು,
ದೃಷ್ಟಿ ಮಂಜಾಗುವ ಮುನ್ನ,
ಸೃಷ್ಟಿಯ ಸೌಂದರ್ಯವನ್ನು ನೋಡೆಂದು…..

ನೆನಪಿಸುತ್ತಿದೆ ನನ್ನ ಕಿವಿಗಳು,
ಕಿವುಡಾಗುವ ಮುನ್ನ,
ಇಂಪಾದ ಸಂಗೀತವನ್ನು ಆಲಿಸು ಎಂದು…….

ನೆನಪಿಸುತ್ತಿದೆ ನನ್ನ ಮೂಗು,
ವಾಸನೆ ಕಳೆದುಕೊಳ್ಳುವ ಮುನ್ನ, ಸುವಾಸನೆಯ ಪರಿಮಳವನ್ನು ಆಘ್ರಾಣಿಸೆಂದು…..

ನೆನಪಿಸುತ್ತಿದೆ ನನ್ನ ನಾಲಿಗೆ,
ನಿರ್ಜೀವವಾಗುವ ಮುನ್ನ ,
ಸವಿರುಚಿಯನ್ನು ಆಸ್ವಾಧಿಸೆಂದು……

ನೆನಪಿಸುತ್ತಿದೆ ನನ್ನ ಬಾಯಿ,
ಮೌನವಾಗುವ ಮುನ್ನ,
ಹಿತವಚನ ನುಡಿ ಎಂದು….

ನೆನಪಿಸುತ್ತಿದೆ ನನ್ನ ಕೈಗಳು,
ಬರಿದಾಗುವ ಮುನ್ನ,
ದಾನ ನೀಡೆಂದು..‌‌…..

ನೆನಪಿಸುತ್ತಿದೆ ನನ್ನ ಬೆರಳುಗಳು,
ತಟಸ್ಥವಾಗುವ ಮುನ್ನ,
ಅತ್ಯುತ್ತಮವಾದ ಸಂದೇಶಗಳನ್ನು ಬರೆಯುತ್ತಿರು ಎಂದು….

ನೆನಪಿಸುತ್ತಿದೆ ನನ್ನ ಕಾಲುಗಳು,
ನಿಲ್ಲುವ ಮುನ್ನ,
ದೂರ ಬಹುದೂರ ನಡೆಯೆಂದು……

ನೆನಪಿಸುತ್ತಿದೆ ನನ್ನ ಮೆದುಳು,
ನಿಷ್ಕ್ರಿಯವಾಗುವ ಮುನ್ನ,
ಎಲ್ಲವನ್ನೂ ಯೋಚಿಸಿ ಕಾರ್ಯಗತ ಮಾಡು ಎಂದು…..

ನೆನಪಿಸುತ್ತಿದೆ ನನ್ನ ಹೃದಯ,
ಸ್ಥಬ್ಧವಾಗುವ ಮುನ್ನ,
ಪ್ರೀತಿಯನ್ನು ಎಲ್ಲರಿಗೂ ಹಂಚು ಎಂದು……….

ನೆನಪಿಸುತ್ತಿದೆ ನನ್ನ ಮನಸ್ಸು,
ಮುದುಡುವ ಮುನ್ನ,
ವಿಶಾಲವಾಗಿ ವ್ಯಾಪಿಸು ಎಂದು…. ‌‌‌‌

ನೆನಪಿಸುತ್ತಿದೆ ನನ್ನ ಭಾವನೆಗಳು,
ಕರಗಿ ಹೋಗುವ ಮುನ್ನ,
ನನ್ನ ಜನರ ಮನಸ್ಸನ್ನು ವಿಶಾಲಗೊಳಿಸಿ ಸಮಾಜವನ್ನು ಪ್ರಬುದ್ದತೆಯೆಡೆಗೆ ಮುನ್ನಡೆಸು ಎಂದು……….

ಏಕೆಂದರೆ,
ನನಗೆ,

ಬಿಪಿ ಚೆಕ್ ಮಾಡಿದರು –
80/120 ಪಕ್ಕಾ,
ಶುಗರ್ ಚೆಕ್ ಮಾಡಿದರು – ನಾರ್ಮಲ್,
ಕೊಲೆಸ್ಟ್ರಾಲ್ – very good,
ಥೈರಾಯ್ಡ್ – Excellent,
pulse – Perfect,
ಹಿಮೋಗ್ಲೋಬಿನ್ – Super,
Heart – First class,
Total body – No problem,

Next……………

ಪ್ರೀತಿ ಚೆಕ್ ಮಾಡಿದರು –
ಸ್ವಲ್ಪ ಜಾಸ್ತಿ,
ತ್ಯಾಗ ಚೆಕ್ ಮಾಡಿದರು –
ಸ್ವಲ್ಪ ಕಡಿಮೆ,
ಕೋಪ – ತುಂಬಾ ಜಾಸ್ತಿ,
ತಾಳ್ಮೆ – Abnormal,
ಅಹಂಕಾರ – Detected,
ಸಹಕಾರ – ಸಾಧಾರಣ,
ಬುದ್ದಿ – ಸ್ವಲ್ಪ ಕಡಿಮೆ,

Next,…….

ನೋವು,….
ಅದು ಯಾವುದಕ್ಕೂ ಲೆಕ್ಕಕ್ಕೇ ಸಿಗಲಿಲ್ಲ,
ಅದು ಯಾವ ಅಳತೆಗೂ ನಿಲುಕಲಿಲ್ಲ,
ಅದು ಯಾರಿಗೂ ಅರ್ಥವಾಗಲೇ ಇಲ್ಲ,
ಅದನ್ನು ಅಳೆಯುವ ಮಾಪನವೂ ಇಲ್ಲ,
ಬದುಕೇ ನೋವಾಗಿರುವಾಗ ಅಳೆಯುವುದೇನನ್ನು ,…..

ತುತ್ತು ಅನ್ನ ತಿನ್ನುವಾಗ ನಿನ್ನ ನೆನಪಾಗುತ್ತದೆ,

ಗುಟುಕು ನೀರು ಕುಡಿಯುವಾಗ ನಿನ್ನ ನೆನಪಾಗುತ್ತದೆ,

ಪ್ರತಿ ಉಸಿರಾಟದಲ್ಲೂ ನಿನ್ನ ನೆನಪಾಗುತ್ತದೆ,

ಬೆಳಕು ಹರಿಯುವಾಗ ನಿನ್ನ ನೆನಪಾಗುತ್ತದೆ,

ಕತ್ತಲು ಕವಿದಾಗಲೂ ನಿನ್ನ ನೆನಪಾಗುತ್ತದೆ,

ಪ್ರತಿ ಮಾತಿನಲ್ಲೂ ನಿನ್ನ ನೆನಪಾಗುತ್ತದೆ,

ಮೌನದಲ್ಲೂ ನಿನ್ನ ನೆನಪಾಗುತ್ತದೆ,

ಧ್ಯಾನದಲ್ಲೂ ನಿನ್ನದೇ ನೆನಪು,

ಹಾಡುವಾಗಲೂ ನಿನ್ನದೇ ನೆನಪು,

ಓದುವಾಗಲೂ ನಿನ್ನದೇ ನೆನಪು,

ಬರೆಯುವಾಗಲೂ ನಿನ್ನದೇ ನೆನಪು,

ಮನಸಿನಲ್ಲಿಯೂ ನಿನ್ನದೇ ನೆನಪು,

ಕನಸಿನಲ್ಲೂ ನಿನ್ನದೇ ನೆನಪು,

ನಗಲೂ ಕೂಡ ನಿನ್ನ ನೆನಪೇ ಕಾರಣ,

ಅಳಲೂ ಕೂಡ ನಿನ್ನ ನೆನಪೇ ಕಾರಣ,

ಅದಕ್ಕೆ,

ನಿನ್ನ ನೆನಪನ್ನು ನೆನಪಿನಿಂದಲೇ ಅಳಿಸಿಹಾಕಬೇಕಿದೆ,

ನಿನ್ನ ನೆನಪನ್ನು ನೆನಪಿನಿಂದಲೇ ಕೊಲ್ಲಬೇಕಿದೆ,

ನಿನ್ನ ನೆನಪನ್ನು ನೆನಪಿನ ಮನಃ ಪಟಲದಿಂದ ನಾಶ ಮಾಡಬೇಕಿದೆ,

ನಿನ್ನ ನೆನಪೇ ನನ್ನ ಯಶಸ್ಸಿನ ನೆಪವಾಗಬೇಕಿದೆ,……..

ಆದರೂ ಬದುಕುತ್ತಿದ್ದೇನೆ,
ನೋವುಗಳನ್ನು ನುಂಗಿ,
ಬದುಕುತ್ತಲೇ ಇರುತ್ತೇನೆ,
ಉಸಿರು ನಿಲ್ಲುವವರೆಗೂ,
ನಾಗರಿಕ ಸಮಾಜದ ನಿರೀಕ್ಷೆಯಲ್ಲಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!