images-31.jpeg
Spread the love

ಬೈಂದೂರು: ದಿನಾಂಕ: 10-06-2026(ಹಾಯ್ ಉಡುಪಿ ನ್ಯೂಸ್) ತಗ್ಗರ್ಸೆ ಗ್ರಾಮದ ಬೈಂದೂರು ವ್ಯವಸಾಯ ಸೇವಾ ಸಂಘದ ಎದುರು ಅನ್ನಪೂರ್ಣ ಹೋಟೆಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಬೈಂದೂರು ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಸುನೀಲ ಕುಮಾರ್ ಬಿ ವೈ ಅವರು ಬಂಧಿಸಿದ್ದಾರೆ.

ತಗ್ಗರ್ಸೆ ಗ್ರಾಮದ ಬೈಂದೂರು ವ್ಯವಸಾಯ ಸೇವಾ ಸಂಘದ ಎದುರು ಅನ್ನಪೂರ್ಣ ಹೋಟೆಲ್‌ ಬಳಿಯ ಖಾಲಿ ಜಾಗದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಸುನೀಲ ಕುಮಾರ್ ಬಿ.ವೈ ರವರಿಗೆ ದಿನಾಂಕ:09-05-2026 ರಂದು ಸಾರ್ವಜನಿಕ ರಿಂದ ಮಾಹಿತಿ ಬಂದ ಮೇರೆಗೆ  ಪಿ.ಎಸ್‌ ಐ ರವರು ಸಿಬ್ಬಂದ್ದಿಯವರೊಂದಿಗೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ಮಾಡಿದ್ದಾರೆ .

ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿ ಮಟ್ಕಾ ಜುಗಾರಿ  ಆಟ ನಡೆಸುತ್ತಿದ್ದ ಆಪಾದಿತ ಮಂಜುನಾಥ ಗಾಣಿಗ ಎಂಬವನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಅವನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ್ದ 1] ನಗದು ರೂ./=550/= 2] ಮಟ್ಕಾ ನಂಬ್ರ ಬರೆದ ಚೀಟಿ-1, 3] ಒಂದು ಬಾಲ್ ಪೆನ್-1 ನ್ನು  ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ 78(1)(3)KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!