ಗಂಗೊಳ್ಳಿ: 08/05/2026 (ಹಾಯ್ ಉಡುಪಿ ನ್ಯೂಸ್) ನಾಡ ಗ್ರಾಮದ ಕೊಡಗುಂಜಿ ಬ್ರಿಜ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐವರನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪವನ್ ನಾಯಕ್ ಅವರು ಬಂಧಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪವನ್ ನಾಯಕ್ ಅವರು ದಿನಾಂಕ:07-05-2026 ರಂದು ತ್ರಾಸಿ ಕಡೆಗಳಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ನಾಡ ಗ್ರಾಮದ ಕೊಡಗುಂಜಿ ಬ್ರಿಡ್ಜ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿರುವುದಾಗಿ ಸಾರ್ವಜನಿಕ ಮಾಹಿತಿ ಬಂದಂತೆ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ತೆರಳಿ ದಾಳಿ ನಡೆಸಿದ್ದಾರೆ.
ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ 1)ರತ್ನಾಕರ ಕಾಂಚನ್ (55),ಕಳುವಿನ ಬಾಗಿಲು ನಾಡಾ ಗ್ರಾಮ , 2) ಸಂತೋಷ್ ಪೂಜಾರಿ(46),ಒಕ್ಕೇರಿ ಬಡಾಕೆರೆ ಗ್ರಾಮ , 3) ರಾಘವೇಂದ್ರ (28),ಪಡುಕೋಣೆ ಚರ್ಚ್ ಬಳಿ ನಾಡಾ ಗ್ರಾಮ , 4) ರಾಜೇಶ್ ಪೂಜಾರಿ (42),ಮಹಾವಿಷ್ಣು ದೇವಸ್ಥಾನದ ಹತ್ತಿರ ಪಡುಕೋಣೆ, ಹಡವು ಗ್ರಾಮ, 5) ಬಾಬು ಮೊಗವೀರ (50), ಪಡುಕೋಣೆ ಹೈಸ್ಕೂಲ್ ಹತ್ತಿರ, ನಾಡಾ ಗ್ರಾಮ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಪಾಲಿಥಿನ್ ಚೀಲ, 13,020/- ರೂಪಾಯಿ ನಗದು, ವಿವಿಧ ಜಾತಿಯ ಇಸ್ಪೀಟ್ ಎಲೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 87 ಕೆ ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿಖದೆ.
