ಬ್ರಹ್ಮಾವರ: ದಿನಾಂಕ:02-05-2026 (ಹಾಯ್ ಉಡುಪಿ ನ್ಯೂಸ್) ಹೊಸ್ಕೆರೆ ನಿವಾಸಿ ಉಮೇಶ್ ಶೆಟ್ಟಿ ಎಂಬವರ ಮನೆಯ ಕಪಾಟಿನಲ್ಲಿದ್ದ ಚಿನ್ನದ ಸರವನ್ನು ಮನೆಗೆ ಬಂದಿದ್ದ ಯಾರೋ ಕದ್ದಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಡೂರು ಗ್ರಾಮದ ನಿವಾಸಿ ಉಮೇಶ್ ಶೆಟ್ಟಿ, (51) ಎಂಬವರು ಮುಂಬಯಿಯಲ್ಲಿ ವ್ಯವಹಾರ ಮಾಡಿಕೊಂಡಿದ್ದು, ಕಾಡೂರು ಗ್ರಾಮದ, ತಂತ್ರಾಡಿ, ಹೊಸ್ಕೆರೆ ಎಂಬಲ್ಲಿರುವ ಉಮೇಶ್ ಶೆಟ್ಟಿ ರವರ ಚಂಪಾ ದುರ್ಗಾ ಎಂಬಮನೆಯಲ್ಲಿ ಉಮೇಶ್ ಶೆಟ್ಟಿ ರವರ ಪ್ರಾಯಸ್ಥರಾದ ತಾಯಿ ಮತ್ತು ತಂದೆ ಮಾತ್ರ ಇದ್ದು, ಉಮೇಶ್ ಶೆಟ್ಟಿ ರವರು ತಿಂಗಳಿಗೊಮ್ಮೆ ಬಂದು ತಾಯಿಗೆ ಚಿಕಿತ್ಸೆ ಕೊಡಿಸಿ ಹೋಗುತ್ತಿದ್ದರು.
ಉಮೇಶ್ ಶೆಟ್ಟಿ ರವರ ತಾಯಿ ಪಾರ್ವತಿ ಇವರ ಅಂದಾಜು 4,00,000/- ಮೌಲ್ಯದ 38 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಉಮೇಶ್ ಶೆಟ್ಟಿ ರವರು ದಿನಾಂಕ: 16/02/2026 ರಂದು ಸಂಜೆ ಅವರ ಮನೆಯ ಕೋಣೆಯ ಡ್ರಾಯರ್ ನಲ್ಲಿ ಇಟ್ಟಿರುತ್ತಾರೆ.
ಉಮೇಶ್ ಶೆಟ್ಟಿ ರವರ ತಾಯಿ ದಿನಾಂಕ: 23/04/2026 ರಂದು ಮೃತಪಟ್ಟಿದ್ದು, ಉಮೇಶ್ ಶೆಟ್ಟಿ ರವರು ಮುಂಬಯಿಂದ ಬಂದು ತಾಯಿ ಅಂತ್ಯಸಂಸ್ಕಾರದ ಕಾರ್ಯ ಮುಗಿಸಿ ದಿನಾಂಕ: 01/05/2026 ರಂದು ಸಂಜೆ ಕೋಣೆಯ ಡ್ರಾಯರ್ ನಲ್ಲಿ ನೋಡಿದಾಗ ಡ್ರಾಯರ್ ನಲ್ಲಿ ಇಟ್ಟಿದ್ದ ಚಿನ್ನದ ಕರಿಮಣಿ ಇಲ್ಲದೇ ಇದ್ದು, ಅದನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 305 BNS ರಂತೆ ಪ್ರಕರಣ ದಾಖಲಾಗಿದೆ.
