ಕೊಲ್ಲೂರು: ದಿನಾಂಕ:02-05-2026 (ಹಾಯ್ ಉಡುಪಿ ನ್ಯೂಸ್) ಚಿತ್ತೂರು ಸರ್ಕಲ್ ನಿಂದ ಮುಂದೆ ಕಾರೊಂದರಲ್ಲಿ ಬಂದ ನಾಲ್ಕು ಜನರ ತಂಡವೊಂದು ಕಾರೊಂದನ್ನು ಅಡ್ಡ ಗಟ್ಟಿ ಕಾರಿನ ಚಾಲಕನಿಗೆ ಹಲ್ಲೆ ನಡೆಸಿ ಕಾರನ್ನು ಜಖಂ ಗೊಳಿಸಿದ್ದಾರೆ ಎಂದು ರಾಕೇಶ್ ಶೇಟ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ದಿನಾಂಕ 01/05/2026 ರಂದು ಮಧ್ಯಾಹ್ನ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ಚಿತ್ತೂರು ಸರ್ಕಲ್ ನಿಂದ ಸ್ವಲ್ಪ ಮುಂದೆ ರಸ್ತೆಯಲ್ಲಿ ಕೊಲ್ಲೂರು ಗ್ರಾಮದ ನಿವಾಸಿ ರಾಕೇಶ್ ಶೇಟ್ (30) ಎಂಬವರು ತಮ್ಮ KA-20 P-8793ನೇ ಕಾರಿನಲ್ಲಿ ತನ್ನ ಹೆಂಡತಿ ಜ್ಯೋತಿ ಶೇಟ್ ಹಾಗೂ ಮಗುವಿನೊಂದಿಗೆ ಕೊಲ್ಲೂರಿನಿಂದ ಕಂಡ್ಲೂರಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗುವಾಗ, ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೆ KA-05 NQ-5298ನೇ ಕಾರಿನ ಚಾಲಕ, ರಾಕೇಶ್ ಶೇಟ್ ರವರ ಕಾರನ್ನು ಓವರ್ ಟೇಕ್ ಮಾಡಿ ಕಾರಿನ ಮುಂದುಗಡೆ ತನ್ನ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ, ಕಾರಿನ ಚಾಲಕ ಹಾಗೂ ಇತರೆ ಮೂವರು ಸೇರಿಕೊಂಡು ರಾಕೇಶ್ ಶೇಟ್ ರ ಬಳಿಗೆ ಬಂದು ಕಾರಿನಲ್ಲಿ ಕುಳಿತ ರಾಕೇಶ್ ಶೇಟ್ ರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ತುಟಿಗೆ ಹಾಗೂ ಕೆನ್ನೆಗೆ ಹೊಡೆದಿರುತ್ತಾರೆ. ಮತ್ತು ಕಾರಿನ ಕಾರಿನ ಮುಂಭಾಗದ ಎರಡೂ ಮೀರರ್ ಹಾಗೂ ಮೀರರ್ ಗ್ಲಾಸ್ ಗಳನ್ನು ಒಡೆದು ಜಖಂಗೊಳಿಸಿ ರೂಪಾಯಿ 10,000/- ದಷ್ಟು ನಷ್ಟ ಉಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ: 126 (2), 115 (2), 352, 324 (4) ಜೊತೆಗೆ 3 (5) BNS ರಂತೆ ಪ್ರಕರಣ ದಾಖಲಾಗಿದೆ.
