images-21.jpeg
Spread the love

ಶಿರ್ವ: ದಿನಾಂಕ 26.04.2026 (ಹಾಯ್ ಉಡುಪಿ ನ್ಯೂಸ್) ತೊಟ್ಲ ಗುರಿ ಪರಿಸರದಲ್ಲಿ ಸರಕಾರಿ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಗೆ ಶಿರ್ವ ಪೊಲೀಸರು ದಾಳಿ ನಡೆಸಿ ಕಲ್ಲು ಕಳ್ಳತನ ನಡೆಸುತ್ತಿದ್ದ ಕರುಣಾಕರ ಎಂಬವನನ್ನು ಬಂಧಿಸಿದ್ದಾರೆ.

ಶಿರ್ವ ಪೊಲೀಸ್ ಠಾಣೆಯ ಶಿವಾನಂದಪ್ಪ ಅವರು ದಿನಾಂಕ:25-04-2026ರಂದು ಗಸ್ತು ಕರ್ತವ್ಯದಲ್ಲಿ ಕಾಪು ತಾಲೂಕು ಶಿರ್ವ ಗ್ರಾಮದ ತೊಟ್ಲಗುರಿ ಪರಿಸರದಲ್ಲಿ ಗಸ್ತು ಸಂಚರಿಸುತ್ತಿರುವ ವೇಳೆ  ಮಾಹಿತಿದಾರರೊಬ್ಬರು ಶಿರ್ವ ಗ್ರಾಮದ ತೊಟ್ಲಗುರಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಕರುಣಾಕರ ಎಂಬಾತನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ ಕಲ್ಲು ಕಳವು ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿರುತ್ತಾರೆ.

ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ನೋಡಿದಾಗ ಸ್ಥಳದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಸ್ಥಳದಲ್ಲಿದ್ದ ಕರುಣಾಕರರವರಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಸಂಬಂಧಪಟ್ಟ ಇಲಾಖೆಯ ಪರವಾನಿಗೆಯನ್ನು ವಿಚಾರಿಸಿದಾಗ ಯಾವುದೇ ದಾಖಲೆ ಪತ್ರವನ್ನು ಹಾಜರುಪಡಿಸಿರುವುದಿಲ್ಲ.

ಈ ಬಗ್ಗೆ ವಿಚಾರಣೆ ನಡೆಸಿದಾಗ ಈ ಸ್ಥಳದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಪರವಾನಿಗೆ ನೀಡಿರುವುದಿಲ್ಲವಾಗಿ ತಿಳಿದು ಬಂದಿರುತ್ತದೆ.ಆದುದರಿಂದ ಈ ಜಾಗದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿ ಕಲ್ಲನ್ನು ಕಳವು ಮಾಡುತ್ತಿರುವ ಕರುಣಾಕರ ಈತನ ವಿರುದ್ದ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಶಿರ್ವಪೊಲೀಸ್‌ ಠಾಣೆಯಲ್ಲಿ  ಕಲಂ: 303(2) ಬಿಎನ್ಎಸ್ ಮತ್ತು ಕಲಂ: 4, 4A, 21 MMDR ACT ರಂತೆ ಪ್ರಕರಣ ದಾಖಲಾಗಿದೆ.

error: No Copying!