ಉಡುಪಿ: ಮೇ೧೬(ಹಾಯ್ ಉಡುಪಿ ನ್ಯೂಸ್) ಕಲ್ಸಂಕದಿಂದ ಮಣಿಪಾಲದ ಕಡೆ ಸಂಚರಿಸುತ್ತಿದ್ದ ಮಣಿಪಾಲದ ಖಾಸಗಿ ಮಾರುತಿ ಓಮ್ನಿ ಆಂಬುಲೆನ್ಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳದಲ್ಲೇ ಇದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಲು ಸಹಕರಿಸಿದರು. ಆಂಬುಲೆನ್ಸ್ ವಾಹನದಲ್ಲಿ ಯಾವುದೇ ರೋಗಿಗಳು ಇಲ್ಲದೆ ಇದ್ದುದರಿಂದ ಹೆಚ್ಚಿನ ಸಮಸ್ಯೆ ಆಗಿಲ್ಲ ಎನ್ನಲಾಗಿದೆ.ಅಗ್ನಿಶಾಮಕ ವಾಹನ ಕೂಡ ಸ್ಥಳಕ್ಕೆ ಆಗಮಿಸಿತ್ತು.