ಬೈಂದೂರು: ಮೇ೧೬(ಹಾಯ್ ಉಡುಪಿ ನ್ಯೂಸ್) ವ್ಯಕ್ತಿ ಯೋರ್ವರ ಬಗ್ಗೆ ಮಾನಹಾನಿಕರ ಪೋಸ್ಟರ್ ಬರೆದು ಸಾರ್ವಜನಿಕ ಸ್ಥಳದಲ್ಲಿ ಅಂಟಿಸುತ್ತಿದ್ದವರನ್ನು ಪ್ರಶ್ನಿಸಿದಾಗ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಬೈಂದೂರು ತಾಲೂಕು,ಉಪ್ಪುಂದ ಗ್ರಾಮ,ಕಾಸನಾಡಿ, ದೇವಿಕ್ರಪಾ ನಿವಾಸಿ ಗಿರೀಶ್ ಶೇಟ್ (೪೧) ಇವರ ವಿರುದ್ದ ಅವಹೇಳನಕಾರಿ ಪೋಸ್ಟರ್ ಗಳನ್ನು ಉಪ್ಪುಂದ ಗ್ರಾಮದ ಉಪ್ಪುಂದ ಅಂಡರ್ ಪಾಸ್ ನಲ್ಲಿ ನಿತ್ಯಾನಂದ ಶೇಟ್, ವೇಣುಗೋಪಾಲ ರೆಡ್ಡಿ ಮತ್ತು ಪ್ರಕಾಶ್ ಶೇಟ್ ಬೈಂದೂರು ಎಂಬವರು ಹಚ್ಚುತ್ತಿರುವ ವಿಷಯ ತಿಳಿದ ಗಿರೀಶ್ ಶೇಟ್ ಆ ಮೂವರಲ್ಲಿ ಯಾಕೆ ನನ್ನ ವಿರುದ್ದ ಪೋಸ್ಟರ್ ಗಳನ್ನು ಹಚ್ಚುತ್ತಿದ್ದೀರಿ ಎಂದು ಕೇಳಲು ಹೋದಾಗ ಆ ಮೂವರು ಗಿರೀಶ್ ಶೇಟ್ ಅವರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ದೂಡಿ ಹಾಕಿ ಗಿರೀಶ್ ಶೇಟ್ ಹಾಗೂ ಅವರ ಕುಟುಂಬವನ್ನು ನಾಶ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರು ನೀಡಿದ್ದು ಈ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .