ಕುಂದಾಪುರ: ದಿನಾಂಕ:18-04-2026 (ಹಾಯ್ ಉಡುಪಿ ನ್ಯೂಸ್) ಪ್ರೀತಿಸಿ ಮದುವೆಯಾದ ಯುವತಿಯೋರ್ವಳು ಗಂಡನೊಂದಿಗೆ ತವರು ಮನೆಗೆ ಬಂದುದಕ್ಕೆ ಸಂಬಂಧಿ ಯೋರ್ವರು ಇನ್ನು ಮುಂದೆ ತವರು ಮನೆಗೆ ಬರಬಾರದೆಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೇಳೂರು ಗ್ರಾಮದ ಗುಳ್ಳಾಡಿ ನಿವಾಸಿ ಶಾಂಭವಿ (21) ಎಂಬವರು ನಯನ್ ಕುಮಾರ್ ಎಂಬವರನ್ನು ಪ್ರೀತಿಸಿ ಮದುವೆಯಾಗಿ ಮನೆಯವರಿಗೆ ವಿರುದ್ದವಾಗಿ ಗಂಡನೊಂದಿಗೆ ವಾಸವಾಗಿರುತ್ತಾರೆ.
ದಿನಾಂಕ 14-04-2026 ರಂದು ಸಂಜೆ ಶಾಂಭವಿರವರು ತನ್ನ ಗಂಡನೊಂದಿಗೆ ತನ್ನ ತವರು ಮನೆಯಾದ ಗೋಪಾಡಿಗೆ ಹೊರಟಿದ್ದು ರಾತ್ರಿ ಸಮಯಕ್ಕೆ ಶಾಂಭವಿ ರವರ ಸಂಬಂದಿ ಮಿಥುನ್ ಎಂಬವರು ಬಂದು ಶಾಂಭವಿ ಮತ್ತು ಅವರ ಗಂಡನಿಗೆ ಅವಾಚ್ಯ ಶಬ್ದದಿಂದ ಬೈದು ಶಾಂಭವಿರವರಿಗೆ ನೀನು ತವರು ಮನೆಗೆ ಯಾಕೆ ಬಂದಿದ್ದು ಮುಂದಕ್ಕೆ ನಿನ್ನ ತವರು ಮನೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶಾಂಭವಿ ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ 352 , 351(2) BNS ರಂತೆ ಪ್ರಕರಣ ದಾಖಲಾಗಿದೆ.
