ಕುಂದಾಪುರ: ದಿನಾಂಕ:14-04-2026(ಹಾಯ್ ಉಡುಪಿ ನ್ಯೂಸ್) ಸೌಕೂರು ಬ್ರಿಜ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ವ್ಯಕ್ತಿ ಯನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ ಬಿ ಎಸ್ ಅವರು ಬಂಧಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ್ ಗೌಡ ಬಿ ಎಸ್ ಅವರು ದಿನಾಂಕ 11/04/2026 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ದೊರೆತ ಸಾರ್ವಜನಿಕ ಮಾಹಿತಿಯಂತೆ ಠಾಣಾ ವ್ಯಾಪ್ತಿಯ ಕಾವ್ರಾಡಿ ಗ್ರಾಮದ ಸೌಕೂರು ಬ್ರಿಡ್ಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದಾತನನ್ನು ಸುತ್ತುವರೆದು ಬಂಧಿಸಿದ್ದಾರೆ.
ಅತನು ಕೃತ್ಯಕ್ಕೆ ಉಪಯೋಗಿಸಿದ 1) 90 ಎಂ.ಎಲ್.ನ ಮೈಸೂರ್ ಲ್ಯಾನ್ಸರ್ ಟೆಟ್ರಾ ಪ್ಯಾಕ್-1. (ಅಂದಾಜು 110/-ರೂ), 2) ಪ್ಲಾಸ್ಟಿಕ್ ಗ್ಲಾಸ್-1. ನ್ನು ಸ್ಥಳದಲ್ಲಿ ಸ್ವಾದೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 15(A) KE ACT ರಂತೆ ಪ್ರಕರಣ ದಾಖಲಾಗಿದೆ.
