ಕುಂದಾಪುರ: ದಿನಾಂಕ:14-04-2026(ಹಾಯ್ ಉಡುಪಿ ನ್ಯೂಸ್) ಬಸ್ರೂರು ಗ್ರಾಮದ ಮೂಡ್ಕೇರಿ ಶ್ರೀ ಕೋಟಿ ಚೆನ್ನಯ ಗರಡಿಗೆ ಕೆಲವರು ಅಕ್ರಮವಾಗಿ ಪ್ರವೇಶಿಸಿ ಬೀಗ ಮುರಿದಿದ್ದಾರೆ ಎಂದು ಅಶೋಕ ಪೂಜಾರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಸ್ರೂರು ಗ್ರಾಮದ ಗರಡಿಗೆ B T ಮಂಜು ಬಡಬಾಳು ಸಿದ್ದಾಪುರ, ಕೇಶವ, ರಾಜು, ಕೃಷ್ಣ ಎಂಬುವವರು ದಿನಾಂಕ 12/04/2026 ರಂದು ಬೆಳಿಗ್ಗೆ ಬಸ್ರೂರು ಗ್ರಾಮದ ಮೂಡ್ಕೇರಿ ಎಂಬಲ್ಲಿರುವ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಅನಧಿಕೃತ ಹಾಗೂ ಅಕ್ರಮವಾಗಿ ಪ್ರವೇಶ ಮಾಡಿ ಬಾಗಿಲ ಬೀಗವನ್ನು ಮುರಿದು ಒಳಗಡೆ ಪ್ರವೇಶಿಸಿದ್ದಾರೆ ಎಂದು ಕುಂದಾಪುರ ಬಸ್ರೂರು ಗ್ರಾಮದ ನಿವಾಸಿ ಅಶೋಕ ಪೂಜಾರಿ (48), ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಕ್ರಮ ಪ್ರವೇಶವನ್ನು ಅಶೋಕ ಪೂಜಾರಿ ಪ್ರಶ್ನಿಸಿದಾಗ ಆಪಾದಿತರುಗಳು ಅಶೋಕ ಪೂಜಾರಿಯವರಿಗೆ ಅವಾಚ್ಯವಾಗಿ ಬೈದು ನಿಂದಿಸಿರುತ್ತಾರೆ. ಅಲ್ಲದೇ ದೇವಸ್ಥಾನದ ಒಳಗಡೆ ನಗದು ಮತ್ತು ಚಿನ್ನ ಇರುತ್ತದೆ. ಆಪಾದಿತರು ಬೀಗ ಒಡೆದು ಸುಮಾರು 500/- ರೂಪಾಯಿ ನಷ್ಟ ಉಂಟು ಮಾಡಿದ್ದು ಅವರು ಸುಮಾರು 15 ಜನ ಸೇರಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 329(4), 352, 324(4) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
