images-17.jpeg
Spread the love

ಪಡುಬಿದ್ರಿ: ದಿನಾಂಕ :08-04-2026( ಹಾಯ್ ಉಡುಪಿ ನ್ಯೂಸ್) ಸ್ಥಳೀಯ ನಿವಾಸಿ ಚೈತ್ರಾ ಎಂಬವರಿಗೆ ಅಪರಿಚಿತ ಆರೋಪಿಗಳಾದ 1.ನಿಶಾ ವರ್ಮಾ ,2. ರಾಕೇಶ್ ಪರದಸಾನಿ ಎಂಬ ಹೆಸರಿನವರು ವಾಟ್ಸಪ್ ಮುಖಾಂತರ ಟೆಲಿಗ್ರಾಂ ಲಿಂಕ್ ಮುಖಾಂತರ https://mint ಎಂಬ ಶೇರಿಂಗ್ ಅಕೌಂಟ್ ಖಾತೆಯನ್ನು ತೆರೆದು ಹಣವನ್ನು ಇನ್ವೆಸ್ಟ್ ಮಾಡಲು ತಿಳಿಸಿದ್ದರು .

ಚೈತ್ರಾ ರವರು ನಂಬಿ ಅದರಂತೆ ಖಾತೆಯನ್ನು ತೆರೆದು ದಿನಾಂಕ 19/03/2026 ರಂದು ಹಂತ ಹಂತವಾಗಿ 1,50,500/- ರೂಪಾಯಿ ಇನ್ವೆಸ್ಟ್ ಮಾಡಿದ್ದು, ನಂತರ ಚೈತ್ರಾ ರವರು ಶೇರಿಂಗ್ ಬಗ್ಗೆ ಅನುಮಾನ ಬಂದು ತಾನು ಕಳುಹಿಸಿದ ಹಣವನ್ನು ವಾಪಾಸು ನೀಡುವಂತೆ ವಿಚಾರಿಸಿದಾಗ ಚೈತ್ರಾ ರವರು ಹಾಕಿದ ಹಣವಾಗಲೀ , ಲಾಭಾಂಶವಾಗಲೀ ನೀಡದೆ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಚೈತ್ರಾ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಕಲಂ: 66(D) IT Act 2008, 316(2), 318(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!